Friday, 17th August 2018

Recent News

3 ವರ್ಷಗಳ ನಂತರ ಟ್ರೆಂಡ್ ಆಯ್ತು ಕಿಚ್ಚನ ಸಿನಿಮಾ!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿದ ‘ರನ್ನ’ ಚಿತ್ರ ಮೂರು ವರ್ಷಗಳ ಬಳಿಕ ಟ್ರೆಂಡ್ ಆಗಿದೆ. 2015ರಲ್ಲಿ ಬಿಡುಗಡೆಯಾದ ಈ ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ.

ರನ್ನ ಟ್ರೆಂಡಿಂಗ್ ಆಗಲು ಕಾರಣವಿದೆ. ಶ್ರೀ ಗಣೇಶ್ ವಿಡಿಯೋದವರು ಜೂನ್ 12 ರಂದು 2 ಗಂಟೆ 35 ನಿಮಿಷಗಳ ಇರುವ ಪೂರ್ಣ ಸಿನಿಮಾವನ್ನು ಅಪ್ಲೋಡ್ ಮಾಡಿದ್ದು, ಇದೂವರೆಗೆ 5 ಲಕ್ಷ ಕ್ಕೂ ಹೆಚ್ಚಿನ ವ್ಯೂ ಕಂಡಿದೆ.

ಫ್ಯಾಮಿಲಿ ಎಂಟರ್ ಟೈನ್‍ಮೆಂಟ್ ಸಿನಿಮಾವಾಗಿರುವ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ಚಿತ್ರದ ಎಲ್ಲ ಹಾಡುಗಳ ವೈರಲ್ ಆಗಿತ್ತು. ರನ್ನ ಸಿನಿಮಾದಲ್ಲಿ ಸುದೀಪ್‍ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಇನ್ನೂ ಈ ಚಿತ್ರದಲ್ಲಿ ಹಿರಿಯ ಹಾಗೂ ಬಹುಭಾಷಾ ನಟಿ ಮಧುಬಾಲಾ ನಟಿಸಿದ್ದರು.

ನಿರ್ದೇಶಕ ನಂದಕಿಶೋರ್ ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ಒಂದು ಹಾಡಿಗೆ ಕಿಚ್ಚನ ಜೊತೆ ಐವರು ನಾಯಕಿಯರು ಹೆಜ್ಜೆ ಹಾಕಿದ್ದರು. ರನ್ನ ಸಿನಿಮಾ ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’ ಚಿತ್ರದ ರಿಮೇಕ್ ಆಗಿದ್ದು, ಎರಡು ಭಾಷೆಗಳಲ್ಲಿ ಈ ಸಿನಮಾ ಸೂಪರ್ ಹಿಟ್ ಆಗಿತ್ತು.

Leave a Reply

Your email address will not be published. Required fields are marked *