Connect with us

Bengaluru City

ಅಭಿಮಾನಿಗಳ ಪ್ರೀತಿಗೆ ಮನಸೋತ ಅದಿತಿ ಪ್ರಭುದೇವ

Published

on

ಬೆಂಗಳೂರು: ಅಪ್ಪಟ ಕನ್ನಡದ ಹುಡುಗಿ ಅದಿತಿ ಪ್ರಭುದೇವ ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ಸೋಮವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 26ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅಭಿಮಾನಿಗಳ ಪ್ರೀತಿಗೆ ಅದಿತಿ ಮನಸೋತಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಸ್ಪೆಷಲ್ ಫೋಟೋ ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಚಂದನವನದ ಉದಯೋನ್ಮುಖ ನಟಿ ಅದಿತಿ ಪ್ರಭುದೇವ ತಮ್ಮ ನಟನೆ, ಬ್ಯೂಟಿಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೈಯಲ್ಲಿ ಹಲವು ಸಿನಿಮಾ ಆಫರ್ ಇಟ್ಟುಕೊಂಡು ಮಿಂಚುತ್ತಿದ್ದಾರೆ. ಮೂಲತಃ ದಾವಣಗೆರೆಯವರಾದ ಅದಿತಿ ಸೀರೆಯುಟ್ಟು ಅಪ್ಪಟ ಕನ್ನಡತಿ ಲುಕ್‍ನ ಫೋಟೋ ಪೋಸ್ಟ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದ ಪ್ರೀತಿಯ ಅಭಿಮಾನಿಗಳಿಗೆ ಕೋಟಿ ಕೋಟಿ ಧನ್ಯವಾದ ಎಂದಿದ್ದಾರೆ.

View this post on Instagram

ನಿನ್ನೆ ಜನ್ಮದಿನದ ಹಾರೈಕೆಗಳನ್ನು ತಿಳಿಸಿದ ಪ್ರತಿಯೊಬ್ಬ ಆತ್ಮೀಯ ಬಂಧುವಿಗೆ ಕೋಟಿ ಕೋಟಿ ಧನ್ಯವಾದಗಳು 🙏. ಪ್ರೀತಿ ಎಂಬುದು ಹಾಗೆಯೆ ,ಮನುಷ್ಯ ಹುಟ್ಟಿದಾಗಿನಿಂದ ಪ್ರತಿ ಸಂಬಂಧದಲ್ಲೂ ನಿಷ್ಕಲ್ಮಶವಾದ ಪ್ರೀತಿಯನ್ನು ಹುಡುಕುತ್ತಲೇ ಜೀವನ ದೂಡುತ್ತಿರುತ್ತಾರೆ., .. ರಕ್ತ ಸಂಬಂಧ ವಲ್ಲದಿದ್ದರೂ ಅಷ್ಟೊಂದು ಪ್ರೀತಿ ತೋರಿ ಹೃದಯದಿಂದ ನೂರಾರು ಹಾರೈಕೆಗಳನ್ನು ಹೇಳಿದ ಪ್ರತಿಯೊಂದು ಪ್ರೀತಿಯ ಜೀವಕ್ಕೂ ಇದೋ ನನ್ನ ಧನ್ಯವಾದಗಳು ❤ My heartly thanks to all the lovely people out thr who were part of my happy day… thanks again for all the love and blessings 🥰 #ethnic #saree

A post shared by 𝓐𝓭𝓲𝓽𝓲 𝓟𝓻𝓪𝓫𝓱𝓾𝓭𝓮𝓿𝓪🌻 (@aditiprabhudeva) on

ಪೋಸ್ಟ್‌ನಲ್ಲಿ ಏನಿದೆ?
ನಿನ್ನೆ ಜನ್ಮದಿನದ ಹಾರೈಕೆಗಳನ್ನು ತಿಳಿಸಿದ ಪ್ರತಿಯೊಬ್ಬ ಆತ್ಮೀಯ ಬಂಧುವಿಗೆ ಕೋಟಿ ಕೋಟಿ ಧನ್ಯವಾದಗಳು. ಪ್ರೀತಿ ಎಂಬುದು ಹಾಗೆಯೇ ಮನುಷ್ಯ ಹುಟ್ಟಿದಾಗಿನಿಂದ ಪ್ರತಿ ಸಂಬಂಧದಲ್ಲೂ ನಿಷ್ಕಲ್ಮಶವಾದ ಪ್ರೀತಿಯನ್ನು ಹುಡುಕುತ್ತಲೇ ಜೀವನ ದೂಡುತ್ತಿರುತ್ತಾನೆ. ರಕ್ತ ಸಂಬಂಧವಲ್ಲದಿದ್ದರೂ ಅಷ್ಟೊಂದು ಪ್ರೀತಿ ತೋರಿ ಹೃದಯದಿಂದ ನೂರಾರು ಹಾರೈಕೆಗಳನ್ನು ಹೇಳಿದ ಪ್ರತಿಯೊಂದು ಪ್ರೀತಿಯ ಜೀವಕ್ಕೂ ಇದೋ ನನ್ನ ಧನ್ಯವಾದಗಳು ಎಂದು ಬರೆದು, ಸೀರೆಯುಟ್ಟಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅದಿತಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿಯೂ ಹಂಚಿಕೊಂಡಿದ್ದರು. ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು.

‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿ ಮೂಲಕ ಕಿರುತೆರೆಗೆ ಅದಿತಿ ಎಂಟ್ರಿ ಕೊಟ್ಟರು. ಆ ಬಳಿಕ 2017ರಲ್ಲಿ ‘ಧೈರ್ಯಂ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟರು. ಮೊದಲ ಚಿತ್ರದಲ್ಲಿ ಅಜಯ್ ರಾವ್ ಜೊತೆ ಅದಿತಿ ನಟಿಸಿದ್ದರು. ಸಾಮಾನ್ಯವಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬಳಿಕ ಕಿರುತೆರೆ ಕಡೆಗೆ ನಟ, ನಟಿಯರು ಮುಖ ಮಾಡಲ್ಲ. ಆದರೆ ಅದಿತಿ ಅವರು ಚಿತ್ರರಂಗಕ್ಕೆ ಕಾಲಿಟ್ಟ ನಂತರವೂ ‘ನಾಗ ಕನ್ನಿಕೆ’ ಧಾರವಾಹಿಯಲ್ಲಿ ಅಭಿನಯಿಸಿದರು. ‘ಬಜಾರ್’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿದ ಅದಿತಿ, ಚಿರಂಜೀವಿ ಸರ್ಜಾ ಅವರಿಗೆ ‘ಸಿಂಗ’ ಚಿತ್ರದಲ್ಲಿ ಸಾಥ್ ಕೊಟ್ಟರು. ಬಳಿಕ ‘ರಂಗನಾಯಕಿ’, ‘ಬ್ರಹ್ಮಾಚಾರಿ’ ಚಿತ್ರದಲ್ಲಿ ಅದಿತಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.