ಸ್ಯಾಂಡಲ್ವುಡ್ನ ಬಹುಬೇಡಿಕೆ ನಟಿ ಅದಿತಿ ಪ್ರಭುದೇವ(Aditi Prabhudeva) ಹಸೆಮಣೆ(Wedding) ಏರಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾ ನಟಿಸಿ ಸೈ ಎನಿಸಿಕೊಂಡಿರುವ ನಾಯಕಿ ಅದಿತಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದೆ. ಅದಿತಿ ಮತ್ತು ಯಶಸ್ವಿ(Yashasvi) ಜೋಡಿಯ ಮದುವೆ ಆಮಂತ್ರಣ ಪ್ರತಿಕೆ ಕೂಡ ಇದೀಗ ಲಭ್ಯವಾಗಿದೆ.
ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ಯಾನೆ ಟಾಪ್ ಪ್ರತಿಭೆ ಅದಿತಿ ಪ್ರಭುದೇವ ಧೈಯಂ, ಬಜಾರ್, ಸಿಂಗಂ, ರಂಗನಾಯಕಿ, ಓಲ್ಡ್ಮಾಂಕ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ನೀಡಿದ್ದರು. ಈಗ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಸಂಬರ್ಗಿಯನ್ನು ಮನೆಗೆ ಕಳುಹಿಸಿ- ಕನ್ನಡಪರ ಹೋರಾಟಗಾರರ ಪಟ್ಟು
ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಇದೇ ನವೆಂಬರ್ 27ರಂದು ಮದುವೆ ಆಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಇದೇ ತಿಂಗಳು ವಿವಾಹವಿರುವುದರಿಂದ ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ.