Connect with us

Bollywood

ಪ್ಲೀಸ್, ಡಿಲೀಟ್ ಮಾಡಿ – ಹೊಸ ಜೀವನ ಆರಂಭಿಸುತ್ತಿರುವ ಝೈರಾ ವಾಸೀಂ

Published

on

– ಅಭಿಮಾನಿಗಳ ಬಳಿ ಝೈರಾ ಮನವಿ

ಮುಂಬೈ: ನಿಮ್ಮ ಮೊಬೈಲ್, ಸೋಶಿಯಲ್ ಮೀಡಿಯಾ ಖಾತೆಯಲ್ಲಿರುವ ನನ್ನ ಫೋಟೋಗಳನ್ನು ಡಿಲೀಟ್ ಮಾಡಿ ಎಂದು ದಂಗಲ್ ಗರ್ಲ್, ನಟಿ ಝೈರಾ ವಾಸೀಂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿರುವ ಝೈರಾ ವಾಸೀಂ ತಮ್ಮ ಖಾತೆಯಲ್ಲಿನ ಎಲ್ಲ ಫೋಟೋಗಳನ್ನ ಡಿಲೀಟ್ ಮಾಡಿಕೊಂಡಿದ್ದಾರೆ. ಕೇವಲ ಸಂದೇಶ, ಸ್ಥಳಗಳ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇನ್‍ಸ್ಟಾಗ್ರಾಂ ಖಾತೆಯಲ್ಲಿ ದೀರ್ಘವಾದ ಪೋಸ್ಟ್ ಮಾಡಿಕೊಂಡಿರುವ ಝೈರಾ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.

ಝೈರಾ ವಾಸೀಂ ಮನವಿ: ನಿಮ್ಮ ನಿರಂತರ ಪ್ರೀತಿ ಮತ್ತು ಹಾರೈಕೆಗೆ ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಿಮ್ಮ ಆಶೀರ್ವಾದ ಮತ್ತು ಬೆಂಬಲವೇ ನನ್ನ ಹೊಸ ಜೀವನಕ್ಕೆ ಸಂಜೀವಿನಿ. ನನ್ನ ಪ್ರತಿ ನಿರ್ಧಾರಗಳನ್ನು ಬೆಂಬಲಿಸಿದ ಎಲ್ಲರಿಗೂ ಚಿರಋಣಿ. ನಿಮ್ಮ ಸೋಶಿಯಲ್ ಮೀಡಿಯಾದಲ್ಲಿರುವ ನನ್ನ ಫೋಟೋಗಳನ್ನು ಡಿಲೀಟ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೆಸರಿನಲ್ಲಿರುವ ಫ್ಯಾನ್ಸ್ ಪೇಜ್ ನಲ್ಲಿರುವ ಫೋಟೋ ತೆಗೆಯಿರಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಇದನ್ನೂ ಓದಿ: ದಂಗಲ್ ನಟಿ ಝೈರಾ ವಾಸಿಮ್ ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಅರೆಸ್ಟ್

ಫೋಟೋ ತೆಗೆಯುವದರಿಂದ ನನ್ನ ಹೊಸ ಜೀವನಕ್ಕೆ ಮತ್ತಷ್ಟು ಸಹಾಯವಾಗಲಿದೆ. ನನ್ನನ್ನು ಪ್ರೀತಿಸುವ ನೀವು ಫೋಟೋಗಳನ್ನು ಡಿಲೀಟ್ ಮಾಡುತ್ತೀರಿ ಎಂದು ನಂಬಿದ್ದೇನೆ. ಆದ್ರೆ ಇಂಟರ್ ನೆಟ್ ನಲ್ಲಿರುವ ಫೋಟೋಗಳನ್ನ ಅಳಿಸಲು ಸಾಧ್ಯವಿಲ್ಲ ಎಂಬುವುದು ನನಗೆ ಗೊತ್ತು ಎಂದು ಬರೆದುಕೊಂಡಿದ್ದಾರೆ.

2019ರಲ್ಲಿ ಬಾಲಿವುಡ್‍ಗೆ ವಿದಾಯ: ಎರಡೇ ಸಿನಿಮಾಗಳಲ್ಲಿ ನಟಿಸಿದ್ರೂ ಬಾಲಿವುಡ್ ನಲ್ಲಿ ತನ್ನ ಛಾಪು ಮೂಡಿಸಿದ ನಟಿ ಝೈರಾ ವಾಸೀಂ. ದಂಗಲ್ ಗರ್ಲ್ ಆಗಿ ಬಣ್ಣದ ಲೋಕಕ್ಕೆ ಬಂದಿದ್ದ ಝೈರಾ ವಾಸೀಂ ಸೀಕ್ರೆಟ್ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು. ನಂತರ ಇರ್ಫಾನ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯ ‘ದ ಸ್ಕೈ ಇಸ್ ಪಿಂಕ್’ನಲ್ಲಿ ಕೊನೆಯ ಬಾರಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸಿನಲ್ಲಿ ಉತ್ತುಂಗದಲ್ಲಿದ್ದ ಝೈರಾ ಬಾಲಿವುಡ್ ತೊರೆಯುದಾಗಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಹಿಂದೂ ನಟಿಯರು ಝೈರಾಳಿಂದ ಸ್ಫೂರ್ತಿ ಪಡೆಯಬೇಕು: ಸ್ವಾಮಿ ಚಕ್ರಪಾಣಿ

ಇಸ್ಲಾಂನಿಂದ ದೂರವಾಗ್ತಿದ್ದೇನೆ: ವರ್ಷದ ಮೊದಲು ನಾನು ಒಂದು ನಿರ್ಧಾರ ಮಾಡಿದೆ. ಆ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಬಾಲಿವುಡ್‍ಗೆ ಹೆಜ್ಜೆ ಇಟ್ಟಾಗ ನನಗೆ ಪಾಪುಲ್ಯಾರಿಟಿಯ ರಸ್ತೆಯನ್ನು ತೆರೆಯಿತು. ನಿಧಾನವಾಗಿ ನಾನು ಯುವ ಜನತೆಗೆ ರೋಲ್ ಮಾಡಲ್ ಆಗಿ ಕಾಣಲಾರಂಭಿಸಿದೆ. ಬಾಲಿವುಡ್‍ಗೆ ಬಂದು 5 ವರ್ಷ ಆಗಿದೆ. ಆದರೆ ನನ್ನ ಕೆಲಸದಲ್ಲಿ ನನಗೆ ಖುಷಿಯಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಇಲ್ಲಿ ಫಿಟ್ ಆಗಿದ್ದೇನೆ ಆದ್ರೆ ನಾನು ಇಲ್ಲಿಯವಳಲ್ಲ. ನಟಿ ಆಗುವ ಕಾರಣದಿಂದ ನಾನು ನನ್ನ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದೇನೆ. ಹಾಗಾಗಿ ನಾನು ಚಿತ್ರರಂಗದಿಂದ ನನ್ನ ಸಂಬಂಧವನ್ನು ಮುರಿಯುತ್ತಿದ್ದೇನೆ. ನಾನು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.

Click to comment

Leave a Reply

Your email address will not be published. Required fields are marked *