Tuesday, 22nd October 2019

Recent News

Plz ನನ್ನ ಜೊತೆ ಸೆಕ್ಸ್ ಮಾಡ್ತೀರಾ – ನಟಿಗೆ ವ್ಯಕ್ತಿ ಮೆಸೇಜ್

ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಮಹಿಳೆಯರಿಗೆ ಮತ್ತು ನಟಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್ ನಟಿ, ಗಾಯಕಿಯೊಬ್ಬರಿಗೆ ಅಸಭ್ಯವಾಗಿ ವ್ಯಕ್ತಿಯೊಬ್ಬ ಮೆಸೇಜ್ ಮಾಡಿದ್ದಾನೆ.

ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ಫೇಸ್‍ಬುಕ್ ಮೂಲಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಸಂದೇಶ ಕಳುಹಿಸಿದ್ದಾನೆ. ಈ ಮೆಸೇಜಿನ ಸ್ಕ್ರೀನ್‍ಶಾಟ್ ತೆಗೆದು ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ವ್ಯಕ್ತಿ ನಟಿಗೆ “ಕೃಷ್ಣಮೂರ್ತಿ ಅವರೇ ನೀವು ನನ್ನೊಂದಿಗೆ ಸೆಕ್ಸ್ ಮಾಡುತ್ತೀರಾ” ಎಂದು ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ.

ನಟಿ ಸುಚಿತ್ರಾ ಅವರು “ರಾಷ್ಟ್ರೀಯ ಅಪರಾಧ ತಡೆಗಟ್ಟುವಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ವ್ಯಕ್ತಿ ತನ್ನ ಬಳಿ ಹೇಳಿಕೊಂಡಿದ್ದಾನೆ. ಆದರೆ ಈತ ಮಹಿಳೆಯರಿಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ದಯವಿಟ್ಟು ಇದರ ಬಗ್ಗೆ ಗಮನಹರಿಸಿ” ಎಂದು ನಟಿ ಆತನ ಫೇಸ್‍ಬುಕ್ ಖಾತೆಯನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ದೂರಿದ್ದಾರೆ.

ಸುಚಿತ್ರಾ ಅವರ ಟ್ವೀಟ್‍ಗೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿದ್ದು, “ನಾವು ನಿಮ್ಮನ್ನು ಹಿಂಬಾಲಿಸುತ್ತಿದ್ದೇವೆ. ದಯವಿಟ್ಟು ನೀವು ನಿಮ್ಮ ದೂರವಾಣಿ ವಿವರಗಳನ್ನು ನೀಡಿ” ಎಂದು ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ತಕ್ಷಣ “ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ಧನ್ಯವಾದಗಳು, ಕೇವಲ ನಿಮ್ಮ ಗಮನಕ್ಕೆ ತರಲು ಮಾತ್ರ ಈ ಬಗ್ಗೆ ತಿಳಿಸಿದೆ. ಇದರಿಂದ ನಾನು ಯಾವುದೇ ಬೆದರಿಕೆಗೆ ಒಳಗಾಗುವುದಿಲ್ಲ. ಆತ ನನ್ನಂತ ಅನೇಕರಿಗೆ ಈ ರೀತಿಯಾಗಿ ಮೆಸೇಜ್ ಮಾಡಿದರೆ ಸಾಮಾಜಿಕ ಜಾಲತಾಣಗಳಲ್ಲಿರುವ ಬೇರೆ ಯುವತಿಯ ಪರಿಸ್ಥಿತಿ ಏನು? ಎಂದು ಪೊಲೀಸರಿಗೆ ಮತ್ತೆ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಮತ್ತೆ ಪೊಲೀಸರು “ಮೇಡಂ ನಾವು ಈಗಾಗಲೇ ಆ ಖಾತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಜೊತೆಗೆ ನೀವು ನೀಡಿದ ಮಾಹಿತಿಯನ್ನು ಸೈಬರ್ ಕ್ರೈಂ ವಿಭಾಗಕ್ಕೂ ರವಾನೆ ಮಾಡಿಸಿದ್ದೇವೆ. ಮುಂದೆ ನಿಮಗೆ ಏನಾದರೂ ಸಮಸ್ಯೆಯಾದರೆ 100 ನಂಬರಿಗೆ ಫೋನ್ ಮಾಡಿ ಅಥವಾ ಟ್ವೀಟ್ ಮಾಡಿ” ಎಂದು ಪೊಲೀಸರು ಧೈರ್ಯ ತುಂಬಿದ್ದಾರೆ.

ನಟಿ ಸುಚಿತ್ರಾ ಕೃಷ್ಣಮೂರ್ತಿ ಕಿರುತೆಯಲ್ಲಿ ನಟಿಸಿದ್ದು, ಜೊತೆಗೆ ಕೆಲವು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ಗಾಯಕಿ ಕೂಡ ಆಗಿದ್ದಾರೆ.

Leave a Reply

Your email address will not be published. Required fields are marked *