ಸ್ಟಾರ್ ನಟರಿಗೆ ತಲೆನೋವಾದ ಶ್ರೀಲೀಲಾ- ಅಂತಹದ್ದೇನಾಯ್ತು?

By
1 Min Read

ಕನ್ನಡತಿ ಶ್ರೀಲೀಲಾ (Sreeleela) ಇದೀಗ ಟಾಲಿವುಡ್‌ನಲ್ಲಿ (Tollywood) ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಕಿಸ್ ಬೆಡಗಿ ಡಿಮ್ಯಾಂಡ್‌ನಲ್ಲಿದ್ದಾರೆ. ಹೀಗಿರುವಾಗ ಶ್ರೀಲೀಲಾ ಪ್ರತಿಭೆ ಇದೀಗ ಸ್ಟಾರ್ ನಟರ ನಿದ್ದೆಗೆಡಿಸಿದೆ. ಶ್ರೀಲೀಲಾ ಜೊತೆ ನಟಿಸಲು ಸ್ಟಾರ್ ನಟರಿಗೆ ಚಿಂತೆ ಶುರುವಾಗಿದೆ. ಇದನ್ನೂ ಓದಿ:ಜಪಾನ್‌ನಲ್ಲಿ ಮಹೇಶ್ ಬಾಬು ಜೊತೆಗಿನ ಚಿತ್ರದ ಬಗ್ಗೆ ರಾಜಮೌಳಿ ಅಪ್‌ಡೇಟ್

ತೆಲುಗಿನಲ್ಲಿ 2 ಸಿನಿಮಾ ಮಾಡಿದ್ಮೇಲೆ ಸ್ಟಾರ್ ಹೀರೋಗಳಿಗೆ ನಾಯಕಿಯಾಗುವ ಮೂಲಕ ಲೀಲಾ ಹಿಟ್ ಲಿಸ್ಟ್‌ಗೆ ಸೇರಿಕೊಂಡಿದ್ದಾರೆ. ಸ್ಟಾರ್ ನಟಿಮಣಿಯರ ಲಿಸ್ಟ್‌ಗೆ ಸೇರ್ಪಡೆಯಾದರು. ಇದೀಗ ಪ್ರತಿಭೆಯೇ ಬೇರೆ ಸ್ಟಾರ್ ನಟರಿಗೆ ತಲೆ ನೋವಾಗಿದೆ. ಸೌಂದರ್ಯ, ಡ್ಯಾನ್ಸಿಂದಲೇ ಗಮನ ಸೆಳೆದ ಶ್ರೀಲೀಲಾ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ನಾಯಕಿಯಾಗಿ ಸದ್ದು ಮಾಡಿದ್ದರು. ಆದರೆ ಕಥೆ ಹೆಚ್ಚಿನ ಗಮನ ವಹಿಸದ ಕಾರಣ ಶ್ರೀಲೀಲಾ ಸಿನಿಮಾಗಳು ಮಕಾಡೆ ಮಲಗಿತ್ತು. ಇನ್ನೂ ಶ್ರೀಲೀಲಾರ (Sreeleela) ಎನರ್ಜಿಟಿಕ್ ಡ್ಯಾನ್ಸ್ ಬೇರೇ ನಟರಿಗೆ ಮ್ಯಾಚ್ ಮಾಡೋದು ಕಷ್ಟವಾಗಿದೆ.

ಶ್ರೀಲೀಲಾ ವೇಗ, ಎನರ್ಜಿಗೆ ಮ್ಯಾಚ್ ಮಾಡಲಾಗದೇ ಅವರ ಜೊತೆ ಕೆಲಸ ಮಾಡಲು ಹಿಂದೇಟು ಹಾಕ್ತಿದ್ದಾರೆ. ಯಾವುದೇ ರೀತಿಯ ಸ್ಟೇಪ್ಸ್ ಇರಲಿ, ಅಲ್ಲಿಯೇ ಕಲಿತು ಸೆಟ್‌ನಲ್ಲಿ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಹೀರೋಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಇದೇ ಈಗ ನಟರಿಗೆ ತಲೆ ನೋವಾಗಿದೆ.

‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ (Pawan Kalyan) ಹೀರೋಯಿನ್ ಆಗಿ ಶ್ರೀಲೀಲಾ ನಟಿಸಿದ್ದಾರೆ. ಹೊಸ ಬಗೆಯ ಕಥೆಗಳನ್ನು ನಟಿ ಕೇಳ್ತಿದ್ದಾರೆ.

Share This Article
Exit mobile version