Sunday, 20th January 2019

ಪತಿಯ ಗುಂಡೇಟಿಗೆ ಖ್ಯಾತ ನಟಿ, ಗಾಯಕಿ ಬಲಿ!

ಇಸ್ಲಾಮಾಬಾದ್: ಪತಿಯ ಗುಂಡೇಟಿಗೆ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಬಲಿಯಾದ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ನಡೆದಿದೆ.

ರೇಷ್ಮಾ ಪತಿಯ ನಾಲ್ಕನೇ ಪತ್ನಿಯಾಗಿದ್ದು, ತನ್ನ ಸಹೋದರನ ಜೊತೆ ಹಾಕಿಮ್‍ಬಾದ್‍ನಲ್ಲಿ ವಾಸಿಸುತ್ತಿದ್ದಳು. ಅಲ್ಲಿಗೆ ಬಂದ ಪತಿ ರೇಷ್ಮಾ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗಿದೆ.

ರೇಷ್ಮಾ ಹಾಗೂ ಪತಿಯ ನಡುವೆ ಮೈಮನಸ್ಸು ಉಂಟಾಗಿತ್ತು. ಈ ಕಾರಣದಿಂದಾಗಿ ರೇಷ್ಮಾ ತನ್ನ ಸಹೋದರನ ಮನೆಯಲ್ಲೇ ವಾಸಿಸುತ್ತಿದ್ದಳು. ನಂತರ ಅಲ್ಲಿಗೆ ಬಂದ ಪತಿ ರೇಷ್ಮಾ ಮೇಲೆ ಗುಂಡು ಹಾರಿಸಿದ್ದಾನೆ. ಅಲ್ಲದೇ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ರೇಷ್ಮಾ ‘ಪಾಶ್ತೋ’ ಹಾಡಿನಿಂದ ಹೆಚ್ಚು ಜನಪ್ರಿಯಗೊಂಡಿದ್ದು, ‘ಜೋಬಲ್ ಗೋಲುನಾ’ ಚಿತ್ರದಲ್ಲಿ ನಟಿಸಿದ್ದರು. ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆಯುತ್ತಿರುವ ಹಿಂಸಾಚಾರದ 15ನೇ ಪ್ರಕರಣ ಇದಾಗಿದ್ದು, ಈ ಹಿಂದೆ ಫೆಬ್ರವರಿ 3 ರಂದು ವೇದಿಕೆಯ ನಟಿ ಸನ್ಬುಲ್ ರನ್ನು ಗುಂಡು ಹಾರಿಸಲಾಯಿತ್ತು.

 

Leave a Reply

Your email address will not be published. Required fields are marked *