ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

By
1 Min Read

ಸ್ಯಾಂಡಲ್‌ವುಡ್ (Sandalwood) ನಟಿ ಶುಭ್ರ ಅಯ್ಯಪ್ಪ (Shubra Aiyappa) ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಹುಕಾಲದ ಗೆಳೆಯ ವಿಶಾಲ್ (Vishal) ಜೊತೆ ಸಂಸಾರಿಕ ಜೀವನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

`ವಜ್ರಕಾಯ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಉದ್ಯಮಿ ವಿಶಾಲ್ ಶಿವಪ್ಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸತತ ಆರು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಮದುವೆಯ ಬಳಿಕ ಶುಭ್ರ ದಂಪತಿ, ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಕ್‌ಟೈಲ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

ವಿಶಾಲ್ ಬ್ಲಾö್ಯಕ್ ಸೂಟ್‌ನಲ್ಲಿ ಮಿಂಚಿದ್ರೆ, ಶುಭ್ರ ಲೈಟ್ ಅರೆಂಜ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಲಲಿತ್ ಮಹಲ್ ಪ್ಯಾಲೇಸ್ ಮೈಸೂರಿನಲ್ಲಿ ಕಾಕ್‌ಟೈಲ್ ಪಾರ್ಟಿ ನಡೆದಿದೆ.

ನಟಿ ಶುಭ್ರ ಮದುವೆ ಜನವರಿ 18ರಂದು ಕೂರ್ಗ್ನ ದೊಡ್ಮನೆ ಎಂಬ 150 ವರ್ಷದ ಹಳೆಯ ಮನೆಯಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಕುಟುಂಬಸ್ಥರು, ಆಪ್ತರು ಅಷ್ಟೇ ಭಾಗವಹಿಸಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Exit mobile version