Connect with us

Bengaluru City

ವಾರಕ್ಕೆ 3 ಸಿನಿಮಾ ಆಫರ್ ಬರ್ತಿತ್ತು, ಆದ್ರೆ ಈಗ ಇಲ್ಲ: ಶೃತಿ ಹರಿಹರನ್

Published

on

ಬೆಂಗಳೂರು: ತಿಂಗಳಲ್ಲಿ ವಾರಕ್ಕೆ ನನಗೆ ಮೂರು ಸಿನಿಮಾ ಆಫರ್ ಗಳು ಬರುತ್ತಿತ್ತು. ಆದ್ರೆ ಇದೀಗ ಯಾವುದೇ ಆಫರ್ ಗಳು ಬರುತ್ತಿಲ್ಲ. ಇದೇನು ನನಗೆ ಸರ್ಪ್ರೈಸ್ ನೀಡಿಲ್ಲ ಅಂತ ನಟಿ ಶೃತಿ ಹರಿಹರನ್ ಕೂಲ್ ಆಗಿ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, ನನಗೆ ಸಿನಿಮಾ ಅವಕಾಶಗಳು ಬರುವುದು ಕಡಿಮೆಯಾಗಿವೆ. ಅನೇಕರು ಇನ್ನು ಮುಂದೆ ನನ್ನ ಜೊತೆ ಯಾವತ್ತೂ ಕೆಲಸ ಮಾಡುವುದಿಲ್ಲ ಎಂದು ಅನ್ನಿಸುತ್ತದೆ. ನಾನು ಕೆಲವರ ವಿರುದ್ಧ ದ್ವೇಷ ಕಟ್ಟಿಕೊಳ್ಳುತ್ತೇನೆ ಎಂದು ನನಗೆ ಮೊದಲೇ ಗೊತ್ತಿತ್ತು. ಆದ್ದರಿಂದ ಇದು ನನಗೆ ಯಾವುದೇ ಸರ್ಪ್ರೈಸ್ ಆಗಿಲ್ಲ. ಹೀಗಾಗಿ ಇದನ್ನೆಲ್ಲವನ್ನು ಒಪ್ಪಿಕೊಂಡೇ ನನ್ನ ಹೋರಾಟ ಮುಂದುವರಿಸುತ್ತೇನೆ ಅಂತ ತಿಳಿಸಿದ್ದಾರೆ.

ನನ್ನ ಜೊತೆ ಕೆಲಸ ಮಾಡಲು ಇಚ್ಛೆ ಇರುವ ನಿರ್ದೇಶಕರು ಬರವಣಿಗೆಯ ಹಂತದಲ್ಲಿದ್ದಾರೆ. ನಟಿಯಾಗಿಯೇ ಇರುವುದರ ಹೊರತಾಗಿ ನನ್ನ ಬೇರೆಲ್ಲಾ ಕನಸುಗಳನ್ನು ನನಸು ಮಾಡುವ ಸಮಯ ಇದಾಗಿದೆ. ಆದರೆ ನಾನು ನಟನೆಯನ್ನು ಬಿಡುವುದಿಲ್ಲ. ನನಗೆ ಖುಷಿಕೊಡುವ ಪಾತ್ರಗಳು ಸಿಕ್ಕರೆ ಖಂಡಿತಾ ನಾನು ಅಭಿನಯಿಸುತ್ತೇನೆ. ನಾನೊಬ್ಬ ಆಶಾವಾದಿ, ನನ್ನ ಮೇಲೆ ನನಗೆ ನಂಬಿಕೆ ಇದೆ. ಸದ್ಯಕ್ಕೆ ನಾನು ಅಭಿನಯಿಸಿರುವ ‘ನಾತಿಚರಾಮಿ’ ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಯಾಕೆಂದರೆ ಈ ಸಿನಿಮಾದ ವಿಷಯ ನನಗೆ ಹೆಚ್ಚು ಆಪ್ತವಾಗಿದೆ ಎಂದು ಹೇಳಿದ್ದಾರೆ.

ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿದ ಬಳಿಕ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೇ ತಾವು ಅಭಿನಯಿಸಿದ್ದ ‘ನಾತಿಚರಾಮಿ’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಇದನ್ನು ನೋಡಿ ಶೃತಿ ಹರಿಹರನ್‍ಗೆ ಯಾರು ಸಿನಿಮಾದ ಆಫರ್ ನೀಡುತ್ತಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಈಗ ಅವರೇ ಮಾಧ್ಯಮಗಳ ಜೊತೆ ಮಾತನಾಡಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗೆ ನಟಿ ಶೃತಿ ಹರಿಹರನ್ ಅವರು ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ್ದು, ಭಾರೀ ಸುದ್ದಿಯಾಗಿತ್ತು. ಬಳಿಕ ಯಾವುದೇ ಸಿನಿಮಾದ ಕಾರ್ಯಕ್ರಮಗಳಲ್ಲೂ ಶೃತಿ ಹರಿಹರನ್ ಕಾಣಿಸಿಕೊಂಡಿರಲಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv