Connect with us

Bengaluru City

ಡ್ರಗ್ ದಂಧೆಕೋರರಿಗೆ ಬಿಜೆಪಿ ಲಿಂಕ್- 3 ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಕಾರ್ತಿಕ್ ರಾಜ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಆಪ್ತ ರಾಹುಲ್ ಜೊತೆ ಸಂಪರ್ಕ ಹೊಂದಿದ್ದ ಕಾರ್ತಿಕ್ ರಾಜ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿಬಿ ಪೊಲೀಸರ ವಶದಲ್ಲಿರುವ ಕಾರ್ತಿಕ್ ರಾಜ್ ಮೂರು ವರ್ಷಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗಿದ್ದ ಎಂಬ ಮಾಹಿತಿ ಸದ್ಯ ಬಹಿರಂಗವಾಗಿದೆ. ಈತ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಕಾರ್ತಿಕ್ ರಾಜ್ ರಾಜಕೀಯ ಚಟುವಟಿಕೆಗಳೊಂದಿಗೆ ಡ್ರಗ್ ಪೆಡ್ಲರ್ ಗಳೊಂದಿಗೆ ಸಂಪರ್ಕ ಹೊಂದಿದ್ದ. ಅಲ್ಲದೇ ಡ್ರಗ್ಸ್ ರಿಸೀವ್ ಮಾಡಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:ನಟಿ ಸಂಜನಾ ಆಪ್ತನ ಜೊತೆ ಖ್ಯಾತ ರಾಜಕಾರಣಿಯ ಪುತ್ರನಿಗೂ ಲಿಂಕ್‌

ರಾಜಕೀಯ ಚಟುವಟಿಕೆ ಮಾತ್ರವಲ್ಲದೇ ಸಾಕಷ್ಟು ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ಕಾರ್ತಿಕ್ ರಾಜ್, ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಬಗ್ಗೆ ಪೊಲೀಸರಿಗೆ ಸಾಕ್ಷಿಗಳು ಲಭ್ಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಾಜಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದ. ಬಿಜೆಪಿ ಯುವ ಮೋರ್ಚಾದ ಸದಸ್ಯನಾಗಿರುವ ಈತನಿಗೆ ಬಿಜೆಪಿ ಪಕ್ಷದ ಅಧಿಕೃತ ಲೇಡರ್ ಹೆಡ್‍ನಲ್ಲಿ ಪ್ರಶಂಸೆಯ ಪತ್ರವನ್ನು ನೀಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

ಇತ್ತ ಬೆಂಗಳೂರಿನಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡ್ರಗ್ಸ್ ಮಾಫಿಯಾಗೆ ಬ್ರೇಕ್ ಹಾಕಲು ದೊಡ್ಡ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ. ತನಿಖೆಯಿಂದ ಹೊಸ ಹೊಸ ಸಾಕ್ಷಿ ಸಿಗುತ್ತಿದ್ದು, ಎಲ್ಲವೂ ತಿಳಿಯುತ್ತೆ. ಊಹಾಪೋಹದ ಮೇಲೆ ಯಾರ ಹೆಸರು ಹೇಳುವುದಿಲ್ಲ. ಸಾಕ್ಷಿ ಆಧಾರ ಇಟ್ಟುಕೊಂಡು ನೋಟಿಸ್ ಕೊಡುತ್ತೇವೆ. ಯಾವುದೇ ರಂಗದವರು ಇದ್ದರು ಯಾರನ್ನೂ ಬಿಡೋದಿಲ್ಲ. ಎಷ್ಟೇ ಪ್ರಭಾವಿಗಳು ಇದ್ದರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸದ್ಯ ಅವರದ್ದೇ ಪಕ್ಷದ ಸದಸ್ಯ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದು, ಯಾವ ಕ್ರಮಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ:  ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

Click to comment

Leave a Reply

Your email address will not be published. Required fields are marked *