Connect with us

Bengaluru City

ಮತಾಂತರ ಆಗಿದ್ದಾರಾ ಗಂಡ-ಹೆಂಡತಿ ನಟಿ ಸಂಜನಾ

Published

on

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಮತಾಂತರ ಆಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಅವರ ಹೆಸರು ಕೇಳಿ ಬಂದ ಸಮಯದಿಂದಲೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಬಂಧನದ ಮುನ್ನ 32 ವರ್ಷವಾದರೂ ಇನ್ನು ಮದುವೆಯೇ ಆಗಿಲ್ಲ. ನನ್ನ ಕಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಜನಾ ಆರೋಪಿಸಿದ್ದರು. ಆದರೆ ಆ ಬಳಿಕ ಅವರು ವೈದ್ಯರೊಬ್ಬರನ್ನು ಕಳೆದ ವರ್ಷವೇ ಮದುವೆಯಾಗಿದ್ದರು ಎಂಬ ಫೋಟೋ ಸಾಕಷ್ಟು ವೈರಲ್ ಆಗಿತ್ತು.

ಸದ್ಯ ಸಂಜನಾ ಗಲ್ರಾನಿ ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾಗಿದೆ. ಡಾ. ಅಜೀವ್ ಪಾಷಾ ಅವರ ಪರಿಚಯವಾದ ಬಳಿಕ ಪ್ರೇಮ ಪಾಶಕ್ಕೆ ಸಿಲುಕಿದ್ದ ಸಂಜನಾ ಅವರು ಮತಾಂತರವಾದ ಆಗಿ ಅವರನ್ನು ಮದುವೆಯಾಗಿದ್ದರು ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭಿಸಿದೆ. ಮದುವೆಯಾದ ಬಳಿಕ ಕೆಲ ಸಮಯ ವೈದ್ಯರೊಂದಿಗೆ ವಾಸವಿದ್ದ ಅವರು 7 ತಿಂಗಳ ಹಿಂದೆಯಷ್ಟೇ ಇಬ್ಬರ ನಡುವೆ ವೈಮನಸ್ಸು ಮೂಡಿದ್ದ ಕಾರಣದಿಂದ ದೂರವಾಗಿದ್ದರು. ಚಿತ್ರರಂಗದಲ್ಲಿ ಇರುವ ಕಾರಣ ತಮ್ಮ ಮದುವೆ ಹಾಗೂ ಮತಾಂತರದ ಮಾಹಿತಿಯನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

ಸಂಜನಾ ಮದುವೆಯಾಗಿರುವುದು ಅಧಿಕೃತ ಮಾಹಿತಿ ಲಭಿಸಿಲ್ಲ. ಆದರೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ನನಗೆ ಹೃದಯ ಸಂಬಂಧಿ ಖಾಯಿಲೆ ಇದೆ. ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ನನ್ನ ಮಗ ರಾಹುಲ್‍ಗೆ ಪರಿಚಯವಿದ್ದು, ಸಂಜನಾ ಪತಿ ಡಾಕ್ಟರ್ ಆಗಿದ್ದು ನನಗೆ ಸಹಾಯ ಮಾಡಿದ್ರು ಎಂದು ಹೇಳಿದ್ದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

ತೆಲುಗು ಕಾರ್ಯಕ್ರಮ ಸಂದರ್ಶನವೊಂದರಲ್ಲಿ 2018ರಲ್ಲಿ ಮಾತನಾಡಿದ್ದ ಸಂಜನಾ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು. ನಾನು ಪ್ರೀತಿಸುತ್ತಿರುವ ಹುಡುಗ ಡಾಕ್ಟರ್ ಆಗಿದ್ದು, ನನ್ನ ಕುಟುಂಬದವರಿಗೂ ಪರಿಚಯವಿದೆ. ಮನೆಗೂ ಬಂದು ಹೋಗುತ್ತಾರೆ. ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರನ್ನು ಪರಿಚಯವಾಗಿದ್ದರು. ನನ್ನ ವೃತ್ತಿ ಜೀವನದ ಆರಂಭದಲ್ಲಿ ಈವೆಂಟ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ವೇಳೆ ಅವರನ್ನು ನೋಡಿದ್ದೆ, ಮೊದಲ ನೋಟದಲ್ಲೇ ಅವರ ಮೇಲೆ ಪ್ರೀತಿ ಮೂಡಿತ್ತು ಎಂದು ಸಂಜನಾ ಹೇಳಿದ್ದರು. ಇದನ್ನೂ ಓದಿ: ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

Click to comment

Leave a Reply

Your email address will not be published. Required fields are marked *