Thursday, 25th April 2019

ಪ್ರೀತಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ರಶ್ಮಿಕಾ

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಪ್ರೀತಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ತನ್ನ ಟ್ವಿಟ್ಟರಿನಲ್ಲಿ ಪ್ರೀತಿಯ ಬಗ್ಗೆ ಎರಡು ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಅವರ ಪ್ರೀತಿಯನ್ನು ಪರೀಕ್ಷೆ ಮಾಡಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಇದು ನಾನು ಪ್ರೀತಿಸುವ ಸಮಯ. ನಿಮ್ಮ ನಿಜವಾದ ಪ್ರೀತಿಯ ಪರೀಕ್ಷೆ ಮಾಡಿದಾಗ ನಿಮ್ಮನ್ನು ಯಾರು ನಿಜವಾಗಿ ಪ್ರೀತಿ ಮಾಡುತ್ತಾರೆ, ಕಾಳಜಿ ತೋರಿಸುತ್ತಾರೆ ಎಂದು ಗೊತ್ತಾಗುವ ಸಮಯ. ಅವರು ಈ ಪ್ರಪಂಚದಲ್ಲಿರುವ ಎಲ್ಲಾ ಪ್ರೀತಿ ಮತ್ತು ಕಾಳಜಿಗೆ ಅರ್ಹರು ಹಾಗೂ ಯಾರು ನಿನ್ನನ್ನು ಪ್ರೀತಿಸಲ್ಲವೋ ಅವರು ಕೂಡ ಸಂತೋಷವಾಗಿರಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಅವರ ಈ ಟ್ವೀಟ್‍ಗೆ ಅವರ ಫ್ಯಾನ್ ಕ್ಲಾಬ್, ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನೀವು ಬೆಳೆಯುತ್ತಾನೆ ಇರಬೇಕು ಟ್ವೀಟ್ ಮಾಡಿದೆ. ಮತ್ತೊಬ್ಬರು ನಿಮ್ಮ ಟ್ವೀಟ್ ಅದ್ಭುತವಾಗಿದೆ. ನೀವು ಬೆಳೆದು ಒಮ್ಮೆ ಆಕಾಶ ಮುಟ್ಟಿದ್ದಾಗ ನಿಮ್ಮ ಕಾಲುಗಳು ನೆಲದ ಮೇಲೆ ಇರಲಿ ಎಂಬುದು ನೆನಪಿರಲಿ ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ ‘ಯಜಮಾನ’ ಚಿತ್ರ ಬಿಡುಗಡೆಯಾಗಿದೆ. ಇತ್ತೀಚೆಗೆ ಅವರು ತೆಲುಗುವಿನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನಲ್ಲಿ ರಶ್ಮಿಕಾ ಫುಲ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *