Connect with us

Bengaluru City

ಬಾಬಿ ವಿಜಯ್‍ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ

Published

on

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತೆಲುಗು ನಟ ವಿಜಯ್ ದೇವರಕೊಂಡ ಅವರಿಗೆ ಡಿಯರ್ ಬಾಬಿ ಎಂದು ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದರು. ಇದೀಗ ವಿಜಯ್ ಅವರಿಗೆ ಬರ್ತ್ ಡೇಗೆ ಸರ್ಪ್ರೈಸ್ ಉಡುಗೊರೆ ಕೊಟ್ಟಿದ್ದಾರೆ.

ನಟ ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಶೂಟಿಂಗ್ ಸೆಟ್‍ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದೆ. ಚಿತ್ರತಂಡದ ಜೊತೆಗೆ ರಶ್ಮಿಕಾ ಕೂಡ ಭಾಗಿಯಾಗಿದ್ದು, ಕೇಕ್ ಕತ್ತರಿಸುವ ಮೂಲಕ ವಿಜಯ್‍ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ರಶ್ಮಿಕಾ ವಿಜಯ್‍ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದರು.

ಇದೇ ವೇಳೆ ನಟಿ ರಶ್ಮಿಕಾ ವಿಜಯ್ ಅವರಿಗೆ ಬ್ರಾಸ್ಲೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ರಶ್ಮಿಕಾ ಕೊಟ್ಟ ಗಿಫ್ಟ್ ಅನ್ನು ಶೂಟಿಂಗ್ ಸೆಟ್‍ನಲ್ಲಿಯೇ ವಿಜಯ್ ಓಪನ್ ಮಾಡಿದ್ದಾರೆ. ಬಳಿಕ ಮೊದಲು ಆ ಬ್ರಾಸ್ಲೆಟ್ ಅನ್ನು ಮೊದಲು ರಶ್ಮಿಕಾ ಕೈಗೆ ಹಾಕಿ ನಂತರ ತಮ್ಮ ಕೈಗೆ ಹಾಕಿಕೊಂಡಿದ್ದಾರೆ.

ನಟಿ ರಶ್ಮಿಕಾ ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದರು. `ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ’ ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು. `ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಈ ಜೋಡಿ `ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿತ್ತು.