Wednesday, 26th June 2019

Recent News

ಸ್ಯಾಂಡಲ್‍ವುಡ್ ಕ್ವೀನ್‍ಗೆ ಫುಲ್‍ಕ್ಲಾಸ್- ರಮ್ಯಾ ಬರ್ತ್ ಡೇ ನಮ್ಗೆ ಕರಾಳ ದಿನವೆಂದ್ರು ಅಭಿಮಾನಿ

ಮಂಡ್ಯ: ನಟ, ಮಾಜಿ ಸಚಿವ ಅಂಬರೀಶ್ ಅಂತ್ಯಕ್ರಿಯೆಗೆ ನಟಿ, ಮಾಜಿ ಸಂಸದೆ ರಮ್ಯಾ ಬಾರದ ಹಿನ್ನೆಲೆಯಲ್ಲಿ ರಮ್ಯಾ ಕಟ್ಟಾ ಅಭಿಮಾನಿಯೇ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸ್ಯಾಂಡಲ್ ವುಡ್ ಕ್ವೀನ್ ವಿರುದ್ಧ ಪೋಸ್ಟ್ ಮಾಡಿದ್ದಾರೆ.

ಅಭಿಮಾನಿ ಗುಣಶೇಖರ್ ಎಂಬವರು ರಮ್ಯಾ ಅವರ ವಿರುದ್ಧ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ರಮ್ಯಾ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಅಭಿಮಾನಿಯಾಗಿ ಗುಣಶೇಖರ್ ಸಾಕಷ್ಟು ಶ್ರಮ ಪಟ್ಟಿದ್ದರು. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ರಮ್ಯಾ ಅವರು ಬಂದಿಲ್ಲ ಎಂದು ಅಭಿಮಾನಿ ಕೋಪಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಮಾನಿ ಪೋಸ್ಟ್ ನಲ್ಲೇನಿದೆ..?
ಗುಣಶೇಖರ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ, `ಇಲ್ಲಿ ಸಲ್ಲದ ನೀವು ಇನ್ನೆಲ್ಲೂ ಸಲ್ಲಲ್ಲ. ಇಂದು ನಿಮ್ಮ ಹುಟ್ಟು ಹಬ್ಬದ ದಿನ ಆದ್ರೆ ನಮಗೆ ಇಂದು ಬೇಸರದ ದಿನ. ಹೃದಯವಂತ ಅಂಬರೀಶ್ ಅವರ ಅಂತಿಮ ದರ್ಶನ ಮಾಡದ ನೀವು ಕನ್ನಡಿಗರ ದರ್ಶನ ಮಾಡಲು ಅನರ್ಹರು. ನಿಮ್ಮ ಮೇಲಿಟ್ಟಿದ್ದ ನಂಬಿಕೆಗಳೆಲ್ಲ ಸುಳ್ಳಾಗಿದೆ. ಅಂಬಿ ಎಲ್ಲಿದ್ದರೂ ಮಂಡ್ಯ ಮರೆತಿರಲಿಲ್ಲ. ಆದ್ದರಿಂದ ಅಂಬಿಗೆ ಮಂಡ್ಯದಿಂದ ಇಂಡಿಯಾವರೆಗೆ ಅಭಿಮಾನಿಗಳಿದ್ದಾರೆ. ರೈತನಾಯಕ ಪುಟ್ಟಣ್ಣಯ್ಯ ಅಂತ್ಯಕ್ರಿಯೆಗೆ ನೀವು ಬರಲಿಲ್ಲ. ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಇಡೀ ದೇಶವೇ ಕಂಬನಿ ಮಿಡಿಯಿತು. ಆದ್ರೆ ನೀವು ಸಾವಿನಲ್ಲೂ ರಾಜಕಾರಣ ಮಾಡುತ್ತೀದ್ದೀರಾ..’ ಎಂದು ನಟಿ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

ಅಷ್ಟೆ ಅಲ್ಲದೆ `ನೀವು ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸುತ್ತಾ ಕಾಲಕಳೆಯುತ್ತಿದ್ದೀರಿ. ನಿಮ್ಮ ತಪ್ಪುಗಳ ಅರಿವು ನನಗಿದ್ದರೂ ನಿಮ್ಮ ಅಭಿಮಾನಿಯಾಗಿ ನಿಮ್ಮನ್ನ ಸಮರ್ಥಿಸಿಕೊಳ್ಳುತ್ತಿದ್ದೆ. ಯಾಕಂದ್ರೆ ತಿಳಿದೋ ತಿಳಿಯದೋ ತಪ್ಪು ಮಾಡಿರಬಹುದು ಅಂತಾ ಅಂದುಕೊಂಡಿದ್ದೆ. ಆದ್ರೆ ನಿಮ್ಮಲ್ಲಿರೋದು ವಿಷ ಅಂತಾ ಗೊತ್ತಿರಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬದಂದು ಅನಾಥ ಮಕ್ಕಳಿಗೆ, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಕೊಟ್ಟು ಆಚರಿಸುತ್ತಿದ್ವಿ, ನಿಮ್ಮನ್ನ ಸಮರ್ಥಿಸಿಕೊಂಡು ಸ್ವಪಕ್ಷೀಯರ ವಿರೋಧವೂ ಕಟ್ಟಿಕೊಂಡಿದ್ದೆ. ಇಂದು ಆ ಹೋರಾಟವೆಲ್ಲಾ ವ್ಯರ್ಥವಾಗಿದೆ. ಇಂದು ನಿಮ್ಮ ಜನ್ಮದಿನವಲ್ಲ ಕರಾಳ ದಿನ’ ಎಂದು ರಮ್ಯ ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರಿಗೆ ಫುಲ್‍ಕ್ಲಾಸ್ ತೆಗೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *