Thursday, 17th October 2019

Recent News

ಸೂಪರ್ ಹೀರೋನನ್ನ ಬಿಗಿದಪ್ಪಿದ YR ಬೇಬಿ- ಅಪ್ಪಂದಿರ ದಿನ ರಾಧಿಕಾ ಫೋಟೋ ಶೇರ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಆಗಾಗ ಮಗಳ ಮುದ್ದು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಪ್ಪಂದಿರ ದಿನಾಚರಣೆಯ ಪ್ರಯುಕ್ತ ಮಗಳು ಯಶ್ ಅವರನ್ನು ತಬ್ಬಿಕೊಂಡಿರುವ ಮುದ್ದಾದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಇಂದು ಅಪ್ಪಂದಿರ ದಿನಾಚರಣೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಧಿಕಾ ಅವರು ತಮ್ಮ ಮಗಳು ಆಕೆಯ ತಂದೆಯೊಂದಿಗಿರುವ ಫೋಟೋವನ್ನು ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿ ರಾಧಿಕಾ ಅವರು, “ಈ ಮುದ್ದಾದ ಸಣ್ಣ ಕೈಗಳು ಮೊದಲ ಬಾರಿಗೆ ತನ್ನ ಸೂಪರ್ ಹೀರೋ ಕತ್ತನ್ನು ಹಿಡಿದಿಕೊಂಡಿವೆ. ಅವರು ಯಾವತ್ತೂ ಆಕೆಯನ್ನು ಕೆಳಗೆ ಬೀಳದಂತೆ ತಡೆಯುತ್ತಾರೆ. ಅಲ್ಲದೆ ಅವಳಿಗೆ ಅವರು ಯಾವತ್ತೂ ನಿರಾಸೆ ಮಾಡಲ್ಲ ಅನ್ನೋ ನಂಬಿಕೆ ನನಗಿದೆ. ಎಲ್ಲ ಸೂಪರ್ ಹೀರೋ ಅಪ್ಪಂದಿರಿಗೆ ಶುಭಾಶಯಗಳು” ಎಂದು ರಾಧಿಕಾ ಅವರು ಬರೆದುಕೊಂಡಿದ್ದಾರೆ.

I know these tiny hands are wrapped around her first and forever Superhero, the one who will never ever let her down ♥️Happy Father's Day to all the amazing Superheroes out there!! 😊

Posted by Radhika Pandit on Saturday, 15 June 2019

ಫೋಟೋದಲ್ಲಿ ರಾಧಿಕಾ ಮಗಳು ತನ್ನ ಎರಡೂ ಕೈಗಳಿಂದ ಅಪ್ಪ ಯಶ್ ಕತ್ತನ್ನು ಹಿಡಿದುಕೊಂಡು ಎದೆ ಮೇಲೆ ಮಲಗಿಕೊಂಡಿದ್ದಾಳೆ. ಅದೇ ರೀತಿ ತಮ್ಮ ಪ್ರೀತಿಯ ಮಗಳ ಕೆನ್ನೆಗೆ ಯಶ್ ಮುತ್ತು ಕೊಟ್ಟಿದ್ದಾರೆ. ಈ ಫೋಟೋದಲ್ಲಿ ತಂದೆ-ಮಗಳು ತುಂಬಾ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ.

Our baby YR turns 6 months today.. she is half way to turning one!! Time flies for sure. Here is a tiny glimpse of her on this special day! 😊 She is our blessing, our angel ♥️

Posted by Radhika Pandit on Sunday, 2 June 2019

Leave a Reply

Your email address will not be published. Required fields are marked *