Connect with us

Bengaluru City

ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ

Published

on

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ರಾಧಿಕಾ ಅವರ ತಂದೆ ದೇವರಾಜ್ ಅವರು ಕಿಡ್ನಿ ಹಾಗೂ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಎನ್‍ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ರಾಧಿಕಾ ತಂದೆ ದೇವರಾಜ್ ನಿಧನರಾಗಿದ್ದಾರೆ.

ದೇವರಾಜ್ ಮೃತದೇಹವನ್ನು ರಾಧಿಕಾ ಅವರ ಕುಟುಂಬ ಇಂದು ಮಂಗಳೂರಿಗೆ ಕೊಂಡೊಯ್ಯಲಿದ್ದು, ಮಂಗಳೂರಿನಲ್ಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗಿದೆ.

ಸದ್ಯ ರಾಧಿಕಾ ಅವರು ಭೈರಾದೇವಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಭೈರಾದೇವಿ ಸಿನಿಮಾದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದು, ಅನುಪ್ರಭಾಕರ್ ರಮೇಶ್‍ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ ಶ್ರೀಜಯ್ ನಿರ್ದೇಶನವಿದ್ದು ಬೆಂಗಳೂರು, ವಾರಣಾಸಿ, ಊಟಿ ಸೇರಿದಂತೆ ಹಲವು ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದೆ.

ಕೌಟುಂಬಿಕ ಕಥಾಹಂದರ ಕಥೆಯ ಈ ಚಿತ್ರದಲ್ಲಿ ರಾಧಿಕಾ ಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ರಾಧಿಕಾ ಮಗಳು ಶಮಿಕಾ ಕೆ. ಸ್ವಾಮಿ ಕ್ಲ್ಯಾಪ್ ಮಾಡುವ ಮೂಲಕ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಮೂಡಿಬರುವ ಮೂರನೇ ಚಿತ್ರ ಭೈರಾದೇವಿ ಗೆ ಚಾಲನೆ ದೊರಕಿತ್ತು.