Monday, 22nd April 2019

Recent News

ದಮಯಂತಿ ಚಿತ್ರಕ್ಕೆ ಯಾರೂ ಊಹಿಸಲಾರದಷ್ಟು ಸಂಭಾವನೆ ಪಡೆದ ರಾಧಿಕಾ

ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ತಮ್ಮ ಮುಂಬರುವ ‘ದಮಯಂತಿ’ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ರಾಧಿಕಾ ಅವರು ಬಹುಭಾಷಾ ನಟಿಯಾಗಿದ್ದು, ತೆಲುಗು ಚಿತ್ರದಲ್ಲೂ ನಟಿಸಿದ್ದಾರೆ. ಅರುಂಧತಿ, ಭಾಗಮತಿ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ನಟಿಸಿದ್ದ ಚಿತ್ರದ ರೀತಿಯಲ್ಲೇ ಇದೀಗ ಅಂಥದ್ದೇ ಕಥೆಯ ದಮಯಂತಿ ಸಿನಿಮಾ ತಯಾರಾಗುತ್ತಿದೆ.

ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ತಕ್ಕಂತೆ ರಾಧಿಕಾ ಹೋಲುತ್ತಿದ್ದರು. ಹೀಗಾಗಿ ರಾಧಿಕಾ ಅವರನ್ನು ಅಪ್ರೋಚ್ ಮಾಡಿದಾಗ ಅವರು ಈ ಸಿನಿಮಾವನ್ನು ಒಪ್ಪಿಕೊಂಡರು. ಸದ್ಯ ದಮಯಂತಿ ಚಿತ್ರದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ದಮಯಂತಿ ಬಹುಕೋಟಿ ಬಜೆಟ್ ಚಿತ್ರವಾಗಿದ್ದು, ಇದು ನಾಯಕಿ ಪ್ರಧಾನ ಸಿನಿಮಾ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ನಾಯಕಿ ರಾಧಿಕಾ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.

ದಮಯಂತಿ ಚಿತ್ರ ನಿರ್ಮಾಪಕ, ನಿರ್ದೇಶಕ ನವರಸನ್ ಆರಂಭದಲ್ಲಿ ಬಾಹುಬಲಿಯಲ್ಲಿ ಅಭಿನಯಿಸಿದ್ದ ಕನ್ನಡತಿ ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ ಅನುಷ್ಕಾ ಶೆಟ್ಟಿ 2 ವರ್ಷದ ಕಾಲ್ ಶೀಟ್ ಫುಲ್ ಆಗಿದ್ದ ಕಾರಣ ಅಭಿನಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಈ ಚಿತ್ರಕ್ಕೆ ರಾಧಿಕಾ ಅವರೇ ಬೇಕೆಂದು ತೀರ್ಮಾನಿಸಿ 80 ಲಕ್ಷ ಮುಂಗಡ ನೀಡಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ 1 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಲಿಸ್ಟ್‍ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *