ಸ್ವೀಟಿ ರಾಧಿಕಾ ಮಧ್ಯರಾತ್ರಿ ಸ್ಮಶಾನದಲ್ಲಿ ಬಿದ್ದಿದ್ಹೇಗೆ ಗೊತ್ತಾ..!

Advertisements

– ಸ್ಮಶಾನದ ಕೆಲಸಗಾರರು ಬಿಚ್ಚಿಟ್ರು ಮೈನಡುಗಿಸುವ ಸತ್ಯ!

ಬೆಂಗಳೂರು: ನಟಿ ರಾಧಿಕ ಬೈರಾದೇವಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶಾಂತಿನಗರ ಸ್ಮಶಾನದ ಗೋರಿಯ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟಾಗಿದೆ. ಆದರೆ ಶಾಂತಿನಗರದ ಈ ಸ್ಮಶಾನದಲ್ಲಿ ಕೆಲಸಗಾರರು ಮಾತ್ರ ಹೇಳೋದೆ ಬೇರೆ. ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾರಿಗೆ ಕಂಟಕ ಬಂದಿದ್ಯಾ? ಒಂದು ಕ್ಷಣ ಮೈನಡುಗಿಸುತ್ತೆ ಸ್ಮಶಾನದೊಳಗಿನ ಕೆಲಸಗಾರರು ಬಿಚ್ಚಿಟ್ಟ ಕತ್ತಲೆಯ ಕಥೆ.

Advertisements

ಶಾಂತಿನಗರದ ಈ ಸ್ಮಶಾನದ ಹೊರಭಾಗದ ರಸ್ತೆಯಲ್ಲೇ ಜನ ರಾತ್ರಿ ಹೊತ್ತು ಗಾಡಿ ಓಡಿಸೋಕೆ ಭಯ ಪಡ್ತಾರೆ. ಮಧ್ಯರಾತ್ರಿಯ ಕತ್ತಲೆಯಲ್ಲಿ ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಕಾಳಿ ವೇಷ ಹಾಕಿ ಹುಣಸೆಹಣ್ಣಿನ ಮರದ ಕೆಳಗೆ ಬೈರಾದೇವಿ ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿದ್ರು. ಇದೇ ಸಮಯದಲ್ಲಿ ಗೋರಿಯಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡು ಒಂದೂವರೆ ತಿಂಗಳು ಬೆಡ್ ರೆಸ್ಟ್ ನಲ್ಲಿದ್ದಾರೆ.

Advertisements

ಸಾಮಾನ್ಯ ಸ್ಮಶಾನದಂತಿದ್ದ ಶಾಂತಿನಗರದಲ್ಲೀಗ ಮಾಟಮಂತ್ರದಂತಹ ಘಟನೆಗಳು ಹೆಚ್ಚಾಗಿದ್ಯಯಂತೆ. ಅಮಾವಾಸ್ಯೆ ಬಂದ್ರೆ ಸಾಕು ನಾಯಿಗಳನ್ನು ಕೊಂದು ಇಲ್ಲಿ ಕ್ಷುದ್ರ ಶಕ್ತಿಯನ್ನು ಅವಾಹನೆ ಮಾಡ್ತಾರಂತೆ. ಇದನ್ನು ದಾಟಿದ್ರೆ ಬೇರೆಯವರಿಗೆ ಅಪಾಯವಾಗುತ್ತೆ. ಅಲ್ಲದೇ ಇತ್ತೀಚೆಗೆ ಸಂಬಂಧಿಕರ ಸ್ಮಶಾನಕ್ಕೆ ಪೂಜೆ ಸಲ್ಲಿಸೋಕೆ ಜನ ಶಾಂತಿನಗರ ಸ್ಮಶಾನದಲ್ಲಿ ಹಿಂದೇಟು ಹಾಕುತ್ತಿದ್ದಾರಂತೆ. ನೆಗೆಟಿವ್ ಎನರ್ಜಿ ಸ್ಮಶಾನದಲ್ಲಿರೋದ್ರಿಂದ ರಾಧಿಕಾಗೆ ತೊಂದರೆಯಾಗಿರಲೂಬಹುದು, ಇದುವರೆಗೆ ಯಾವ ಶೂಟಿಂಗ್ ಸಂದರ್ಭದಲ್ಲೂ ಈ ರೀತಿ ಅನಾಹುತವಾಗಿಲ್ಲ ಅನ್ನೋದು ಕೆಲಸಗಾರರ ಮಾತು.

ಈ ಸ್ಮಶಾನದಲ್ಲಿ ಎಂಟ್ರಿಯಾಗುತ್ತಲೇ ಕಾಳಿ ದೇವಿಯ ದೇಗುಲವಿದೆ. ಮೂಲವಿಗ್ರಹವಿರುವಾಗ ಇನ್ನೊಂದು ದೇವರ ಸೆಟ್ ಹಾಕಿ ಶೂಟಿಂಗ್ ಮಾಡುವಂತದ್ದು ಅಥವಾ ಸ್ಮಶಾನದ ಅವರಣದಲ್ಲಿ ಗೋರಿಯ ಪಕ್ಕ ಉಪ್ಪು, ಮೆಣಸು ಹಾಕಿ ಮಂತ್ರಪಠನೆ ಮಾಡಿದ್ರಿಂದ ಅನಾಹುತ ಸಂಭವಿಸಿರಬಹುದು. ಇಲ್ಲಿ ಏನೇ ಕೆಲಸ ಮಾಡಿದ್ರೂ ಮೊದಲು ಕಾಳಿಗೆ ಪೂಜೆ ಸಲ್ಲಿಸಲೇಬೇಕು. ಆದರೆ ಸಿನಿಮಾ ಟೀಮ್ ಇದನ್ನು ಮಾಡದೇ ಇದ್ದಿದ್ರಿಂದ ಹೀಗಾಗಿರಬಹುದು ಎಂದು ಸ್ಮಶಾನದ ಸಿಬ್ಬಂದಿ ಪುರಷೋತ್ತಮ್ ಹೇಳುತ್ತಾರೆ.

Advertisements

ಸ್ಮಶಾನ ಅಂದ್ರೆ ಅಲ್ಲೊಂದು ನೆಗೆಟಿವ್ ಎನರ್ಜಿ ಇರುತ್ತೆ ಅನ್ನುವ ನಂಬಿಕೆ ಸಾಮಾನ್ಯ. ಏನೇ ಆಗಲಿ ಅದಷ್ಟು ಬೇಗ ರಾಧಿಕಾ ಚೇತರಿಸಿಕೊಳ್ಳಲಿ ಅವರ ಆರೋಗ್ಯ ಸುಧಾರಿಸಲಿ ಅಂತಾ ಹಾರೈಸೋಣ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Exit mobile version