Connect with us

Latest

ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿಯನ್ನು ಬೆಂಬಲಿಸಲು ನಟಿಯಿಂದ ನಗ್ನ ಫೋಟೋ ಶೇರ್

Published

on

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದ ಗಾಯಕಿಯನ್ನು ಬೆಂಬಲಿಸಲು ಮುಂಬೈ ಮೂಲದ ಪಾಕಿಸ್ತಾನಿ- ಆಫ್ಘಾನಿ ನಟಿ ತನ್ನ ನಗ್ನ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾಳೆ.

ಮಂಗಳವಾರ ನಟಿ ಮಲೀಶಾ ಹಿನಾ ಖಾನ್, ಗಾಯಕಿ ರಬಿ ಫಿರ್ಜಾದಾಳನ್ನು ಬೆಂಬಲಿಸಲು ತನ್ನ ನಗ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ಇತ್ತೀಚೆಗೆ ರಬಿ ಫಿರ್ಜಾದಾಳ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗಳು ನಡೆದಿತ್ತು. ರಬಿಳನ್ನು ಬೆಂಬಲಿಸಲು ಮಲೀಶಾ ಹೊಸದೊಂದು ಟ್ವಿಟ್ಟರ್ ಖಾತೆ ತೆರೆದು ಅದರಲ್ಲಿ ತಮ್ಮ ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಇದನ್ನೂ ಓದಿ: ಪ್ರೈವೇಟ್ ಫೋಟೋ ಲೀಕ್ – ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿ ಚಿತ್ರರಂಗ ಬಿಡಲು ನಿರ್ಧಾರ

ಕೆಲ ದಿನಗಳ ಸಾಮಾಜಿಕ ಜಾಲತಾಣಗಳಲ್ಲಿ ರಬಿಳ ಪ್ರೈವೇಟ್ ಫೋಟೋಗಳು ಲೀಕ್ ಆಗಿತ್ತು. ಫೋಟೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆ ಜನರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಆಗ ರಬಿ ತನ್ನ ಟ್ವಿಟ್ಟರಿನಲ್ಲಿ, “ನಾನು ರಬಿ ಫಿರ್ಜಾದಾ ಶೋಗಳನ್ನು ತ್ಯಜಿಸುತ್ತಿದ್ದೇನೆ. ಅಲ್ಲಾ ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ ಮತ್ತು ನನ್ನ ಪರವಾಗಿ ಜನರನ್ನು ನಿಲ್ಲುವಂತೆ ಮಾಡಲಿ” ಎಂದು ಟ್ವೀಟ್ ಮಾಡಿದ್ದಳು. ಈ ಬಗ್ಗೆ ರಬಿ ಫೆಡೆರಲ್ ಇನ್‍ವೆಸ್ಟಿಗೇಶನ್ ಏಜೆನ್ಸಿಗೆ ದೂರು ನೀಡಿದ್ದಳು ಎನ್ನಲಾಗಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ ರಬಿ ಲಹೋರ್ ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ ನಲ್ಲಿ ಹೆಬ್ಬಾವು ಮತ್ತು ಮೊಸಳೆ ಜೊತೆ ವಿಡಿಯೋ ಮಾಡಿ ಮೋದಿಗೆ ನಿಂದಿಸಿದ್ದಳು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಬಿ ಫಿರ್ಜಾದಾವಿರುದ್ಧ ದೂರು ದಾಖಲಾಗಿತ್ತು.

ಹೆಬ್ಬಾವು ಮತ್ತು ಮೊಸಳೆಯನ್ನು ಹಿಡಿದು ವಿಡಿಯೋ ಮಾಡಿದ್ದ ರಬಿ, ನಾನು ಕಾಶ್ಮೀರಿ ಮಹಿಳೆ, ಭಾರತಕ್ಕಾಗಿ ನಾವು ಹಾವುಗಳೊಂದಿಗೆ ಸಿದ್ಧವಾಗಿದ್ದೇವೆ. ಈ ಉಡುಗೊರೆಗಳು ನಿಜಕ್ಕೂ ಮೋದಿಯವರಿಗೆ. ನೀವು ಕಾಶ್ಮೀರಿಗಳಿಗೆ ತೊಂದರೆ ನೀಡುತ್ತಿದ್ದೀರಿ. ಆದ್ದರಿಂದ ನಾನು ನಿಮಗಾಗಿ ಈ ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿದ್ದೇನೆ. ನೀವು ನರಕದಲ್ಲಿ ಸಾಯಲು ಸಿದ್ಧರಾಗಿ. ನನ್ನ ಸ್ನೇಹಿತರು ನರಕದಲ್ಲಿ ನಿಮ್ಮ ಜೊತೆ ಹಬ್ಬವನ್ನು ಮಾಡುತ್ತಾರೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಳು.

ಇದಾದ ಬಳಿಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆತ್ಮಹತ್ಯೆ ಬಾಂಬರ್ ರೀತಿಯಲ್ಲಿ ಉಡುಪು ಧರಿಸಿರುವ ಫಿರ್ಜಾದಾ, `ಮೋದಿ ಹಿಟ್ಲರ್’ ಹಾಗೂ `ಕಾಶ್ಮೀರದ ಭೇಟಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಳು.