Connect with us

Cinema

ಸೀಜರ್ ಪ್ರಚಾರದಿಂದ ಪಾರೂಲ್ ಯಾದವ್ ಮಿಸ್ಸಿಂಗ್!

Published

on

ಬೆಂಗಳೂರು: ‘ಪ್ಯಾರ್ ಗೆ ಆಗ್ಬಿಟೈತೆ’ ಬೆಡಗಿ ಪಾರೂಲ್ ಯಾದವ್ ಸೀಜರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಹಣ ಪಡೆಯದೇ ಚಿತ್ರದ ಪ್ರಚಾರಕ್ಕೂ ಬರದೇ ಕಾಣೆಯಾಗಿದ್ದಾರೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ಸೀಜರ್ ಸಿನಿಮಾದಲ್ಲಿ ಪಾರೂಲ್ ಯಾದವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರಿಗೆ ಚಿತ್ರತಂಡ 1.5 ಲಕ್ಷ ರೂ.ಕೊಡಬೇಕಿತ್ತು. ಬಾಕಿ ಉಳಿದಿರುವ ಹಣವನ್ನು ನೀಡಿ ಸಿನಿಮಾ ಪ್ರಮೋಶನ್ ಗೆ ಕರೆಯಬೇಕೆಂದರೂ ಸಂಪರ್ಕಕ್ಕೆ ಸಿಗ್ತಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಖುದ್ದಾಗಿ ಹಣ ನೀಡಲು ನಿರ್ಧರಿಸಿದೆ ಅಂತಾ ಹೇಳಲಾಗಿದೆ.

ವಿನಯ್ ಕೃಷ್ಣ ಸಾರಥ್ಯದ ಸೀಜರ್ ಸಿನಿಮಾ ಮುಹೂರ್ತ ಆಚರಿಸಿಕೊಂಡು ಬರೋಬ್ಬರಿ 4 ವರ್ಷ ಆಗಿದೆ. ಲಾಂಗ್‍ಜರ್ನಿ ಕಂಪ್ಲೀಟ್ ಮಾಡಿರೋ ಸೀಜರ್ ಎಲ್ಲಾ ಕೆಲಸ ಮುಗಿಸಿಕೊಂಡು ಥಿಯಟೇರ್ ಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಇದೇ ಶುಕ್ರವಾರ ರವಿಚಂದ್ರನ್, ಚಿರು ಕಾಂಬಿನೇಷನ್‍ನ ಸಿನಿಮಾ 230 ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗ್ತಿದೆ.

ನಾಲ್ಕು ವರ್ಷಗಳ ಹಿಂದೆ ಚಂದನ್ ಸೈನ್ ಮಾಡಿದ ಮೊದಲ ಸಿನಿಮಾ ಇದು. ಈ ಸೀಜರ್ ಗೆ ಟ್ಯೂನ್ಸ್ ಕಂಪೋಸ್ ಮಾಡುವ ಮೂಲಕ ಟಾಲಿವುಡ್, ಕಾಲಿವುಡ್ ಜೊತೆ ಮಾಲಿವುಡ್‍ಗೂ ಎಂಟ್ರಿ ಕೊಡ್ತಿದ್ದಾರೆ ಚಂದನ್ ಶೆಟ್ಟಿ. ನಾಲ್ಕು ಭಾಷೆಯಲ್ಲಿ ರೆಡಿಯಾಗಿರೋ ಸೀಜರ್ ಬೇರೆ ಬೇರೆ ಟೈಮ್‍ನಲ್ಲಿ ಪರಭಾಷೆಯಲ್ಲಿ ಮಿಂಚಲಿದೆ.

ನಾಯಕಿ ಪಾರುಲ್ ಯಾದವ್ ಪ್ರಚಾರಕ್ಕೆ ಬರದೆ ಇರೋದರ ಬಗ್ಗೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. 12 ರಿಂದ 13 ಕೋಟಿ ವೆಚ್ಚದಲ್ಲಿ ರೆಡಿಯಾಗಿರುವ ಅದ್ಧೂರಿ ಸೀಜರ್ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಸೀಜರ್ ಸಿನೆಮಾದ ತಂತ್ರಜ್ಞರು ಹೇಳೋದೇನು ಗೊತ್ತಾ..?