Connect with us

Cinema

ಗೋಲಿ ಸೋಡಾ ಫ್ಯಾಕ್ಟರಿಯಲ್ಲಿ ನೀತುಶೆಟ್ಟಿ

Published

on

ಬೆಂಗಳೂರು: ನಟಿ ನೀತು ಶೆಟ್ಟಿ ಗೋಲಿ ಸೋಡಾ ಫ್ಯಾಕ್ಟರಿಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.

‘ಕೊರಗಪ್ಪ ಗೋಲಿ ಸೋಡಾ ಫ್ಯಾಕ್ಟರಿ’- ಇದು 1961ರಲ್ಲಿ ಸ್ಥಾಪಿಸಿ ಇವತ್ತಿನವರೆಗೂ ನಡೆಸಿಕೊಂಡು ಬಂದಿರೋವಂತ ಕೊರಗಪ್ಪನವರ, ಪಾಪ್ಯುಲರ್ ಗೋಳಿ/ಗೋಲಿ ಸೋಡಾ ಅಂಗಡಿ ಹಾಗೂ ಉತ್ಪಾದನಾ ಕೇಂದ್ರ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಿಂದ ತುಂಬಾ ಹತ್ತಿರವಿರುವ ಫೆರ್ರಿ ರೋಡಲ್ಲಿ ಇದೆ. ಗೂಗಲ್ ಮ್ಯಾಪ್ಸ್ ಪರ್ಫೆಕ್ಟ್ ಆಗಿ ಕರ್ಕೊಂಡ್ ಹೋಗುತ್ತೆ. ಒಮ್ಮೆ ಭೇಟಿ ನೀಡಿ ಎಂದು ನೀತು ಶೆಟ್ಟಿ ಬರೆದುಕೊಂಡಿದ್ದಾರೆ.

View this post on Instagram

'KORAGAPPA GOLI SODA FACTORY', Mangalore 'ಕೊರಗಪ್ಪ ಗೋಲಿ ಸೋಡಾ ಫ್ಯಾಕ್ಟರಿ ' ಇದು 1961 ಅಲ್ಲಿ ಸ್ಥಾಪಿಸಿ ಇವತ್ತಿನವರೆಗೂ ನಡೆಸಿಕೊಂಡು ಬಂದಿರೋವಂತ ಕೊರಗಪ್ಪನವರ, ಪಾಪ್ಯುಲರ್ ಗೋಳಿ/ಗೋಲಿ ಸೋಡಾ ಅಂಗಡಿ ಹಾಗೂ ಉತ್ಪಾದನಾ ಕೇಂದ್ರ.. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಿಂದ ತುಂಬಾ ಹತ್ತಿರವಿರುವ ಫೆರ್ರಿ ರೋಡಲ್ಲಿ ಇದೆ.. ಗೂಗಲ್ ಮ್ಯಾಪ್ಸ್ ಪರ್ಫೆಕ್ಟ್ ಆಗಿ ಕರ್ಕೊಂಡ್ ಹೋಗುತ್ತೆ.. ಟ್ರೈ ಮಾಡಿ !!

A post shared by Neethu (ರಾಧಾ) (@neetushettysays) on

ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನೀತು ಶೆಟ್ಟಿ, ಖಾಸಗಿ ಮತ್ತು ವೃತ್ತಿ ಜೀವನದ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ವಿಡಿಯೋ ಶೇರ್ ಮಾಡಿಕೊಂಡಿದ್ದ ನಟಿ ನೀತು, ರಂಗಭೂಮಿ ಕಲಾವಿದರೇ ನನಗೆ ಸ್ಫೂರ್ತಿ. ಎಷ್ಟೇ ಒತ್ತಡ, ನೋವುಗಳಿದ್ರೆ ರಂಗಭೂಮಿಗೆ ಬಂದಾಗ ಎಲ್ಲವನ್ನು ಮರೆತು ನಟಿಸುತ್ತಾರೆ. ಬಾಲಿವುಡ್ ನಟಿ ತಬು ನನ್ನ ನೆಚ್ಚಿನ ತಾರೆ. ಅವರು ಎಲ್ಲ ಪಾತ್ರಗಳಲ್ಲಿ ನಟಿಸೋದನ್ನ ನೋಡಿದ್ರೆ ನಮಗೆ ಸ್ಫೂರ್ತಿಯಾಗುತ್ತದೆ. ಹಾಗೆ ಮಾಲಾಶ್ರೀ ಸಹ ನನಗೆ ಇಷ್ಟ ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *