Monday, 24th February 2020

Recent News

ಮದುವೆಯ ಎಲ್ಲ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್

ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಮೇ2 ರಂದು ನಟಿ ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಲ್‍ನಲ್ಲಿ ನಡೆಯುವ ಮದುವೆ ಸಂಭ್ರಮಕ್ಕೆ ಸ್ಯಾಂಡಲ್‍ವುಡ್‍ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ. ನಾಳೆಯಿಂದ ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ ಶುರುವಾಗಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಇದೇ ತಿಂಗಳು 29ಕ್ಕೆ ಕೋರಮಂಗಲದ ಚರ್ಚ್‍ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ.

ಮೇ 2ರ ಬೆಳಗ್ಗೆ 10.30ರಿಂದ 11 ಗಂಟೆಗೆ ಮದುವೆ ಮುಹೂರ್ತವಿದ್ದು, ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದೆ. ನಾಳೆಯಿಂದ ಎಲ್ಲ ಕಾರ್ಯಕ್ರಮಗಳು ಶುರುವಾಗುತ್ತಿದ್ದು, ನಾಳೆಯಿಂದ ನಾನು ಮನೆಯಲ್ಲೇ ಬಂಧಿ ಆಗಿರುತ್ತೇನೆ. ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಲು ಆಗುವುದಿಲ್ಲ. ಫೋನಿನಲ್ಲೂ ಮಾತನಾಡುವುದ್ದಕ್ಕೆ ಸಾಧ್ಯವಾಗುವುದ್ದಿಲ್ಲ. ಹಾಗಾಗಿ ಇಂದೇ ಎಲ್ಲ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಿದ್ದೇನೆ ಎಂದು ಮೇಘನಾ ಮಾಧ್ಯಮಗಳಿಗೆ ತಿಳಿಸಿದರು.

ಮೊದಲು ಎಂದರೆ ನಾಳೆ ಚಪ್ಪರ ಪೂಜೆ ನಡೆಯಲಿದೆ. ನಂತರ ಹಳದಿ ಶಾಸ್ತ್ರ, ಬಳೆ ಶಾಸ್ತ್ರ ನಡೆಯಲಿದೆ. ಹಳದಿ ಶಾಸ್ತ್ರಕ್ಕೆ ಇಂಡೋ ವೆಸ್ಟ್ರನ್ ಲುಕ್, ಮೆಹೆಂದಿಗೆ ನಾರ್ಥ್ ಇಂಡಿಯನ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತೇನೆ. ಸ್ಯಾಂಡಲ್‍ವುಡ್‍ನಲ್ಲಿ ಮೊದಲ ಬಾರಿಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಂತೆ ನಮ್ಮ ಮದುವೆ ಬೆಂಗಳೂರಿನ ಸೇಂಟ್ ಆಂಟೋನಿಸ್ ಚರ್ಚ್‍ನಲ್ಲಿ ನಡೆಯಲಿದೆ. ಇದಾದ ಬಳಿಕ ಮೆಹಂದಿ ಶಾಸ್ತ್ರ ಮನೆಯಲೇ ನಡೆಯಲಿದೆ. ಇದೆಲ್ಲಾ ಮುಗಿದ ಮೇಲೆ ಮುಹೂರ್ತ ಹಾಗೂ ಆರತಕ್ಷತೆ ನಡೆಯಲಿದೆ.

ಒಂದು ವಾರದಿಂದ ಕಾರ್ಯಕ್ರಮಗಳೆಲ್ಲ ನಡೆಯಲಿದ್ದು, ಕೆಲವು ಕಾರ್ಯಕ್ರಮ ಪ್ರೈವೆಟ್ ಆಗಿ ನಡೆಯಲಿದೆ. ಚರ್ಚ್‍ಯೊಳಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ಪ್ರೈವೆಟ್ ಆಗಿ ನಡೆಯಲಿದೆ. ಹೀಗೆ ಒಂದರ ಮೇಲೊಂದು ಕಾರ್ಯಕ್ರಮಗಳು ನಡೆಯಲಿವೆ. ಮೇ 2ರಂದು ಮಾಧ್ಯಮದವರಿಗೆ ಚಿತ್ರೀಕರಿಸಲು ಅವಕಾಶವಿದ್ದು, ಚರ್ಚ್‍ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ. ಏಕೆಂದರೆ ಅಲ್ಲಿ ಮಾಧ್ಯಮದವರಿಗೆ ಪ್ರವೇಶವಿರುವುದ್ದಿಲ್ಲ. ನಾವೇ ನಮ್ಮ ಮದುವೆಯ ಫೂಟೇಜ್ ಕೋಡುತ್ತೇವೆ ಎಂದು ತಿಳಿಸಿದರು.

ಏ. 26ರಂದು ಕೋರಮಂಗಲದಲ್ಲಿರುವ ಸೆಂಟ್ ಆಂಟೋನಿಸ್ ಚರ್ಚ್‍ನಲ್ಲಿ 3-4 ಗಂಟೆ ಕಾರ್ಯಕ್ರಮ ನಡೆಯಲಿದೆ. ನಾನು ಹಿಂದೂ ಆಗಿದ್ದು, ನನ್ನ ಪತ್ನಿ ಪ್ರಮೀಳಾ ಜೋಷಾಯ್ ಕ್ರಿಶ್ಚಿಯನ್ ಆಗಿದ್ದಕ್ಕೆ ಈ ಮದುವೆ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿದೆ ಎಂದು ಹಿರಿಯ ನಟ ಸುಂದರ್ ರಾಜ್ ತಿಳಿಸಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರ ರಂಗದ ಖ್ಯಾತ ಕಲಾವಿದರನ್ನು ಮದುವೆಗೆ ಆಹ್ವಾನಿಸಲಾಗಿದೆ.

Leave a Reply

Your email address will not be published. Required fields are marked *