Connect with us

Cinema

ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ರಹಸ್ಯ ರಿವೀಲ್ – ಷರತ್ತುಗಳು ಅನ್ವಯ, ರೆಸಾರ್ಟ್‍ಗಳಿಂದ ಫ್ರೀ ಟಿಕೆಟ್

Published

on

ಬೆಂಗಳೂರು: ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ನಟಿ ಮಣಿಯರ ದಂಡೇ ಕಾಣುತ್ತಿದ್ದು, ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಅವೇ ಚಿತ್ರಗಳು ತುಂಬಿಕೊಂಡಿವೆ. ತುಂಡುಡುಗೆ ತೊಟ್ಟು ಪೋಸ್ ನೀಡಿದ ಚಿತ್ರಗಳು ಹುಡುಗರ ಹಾರ್ಟ್ ಬ್ರೇಕ್ ಮಾಡಿವೆ. ಇದರೊಂದಿಗೆ ಉಳಿದೆಲ್ಲ ಪ್ರವಾಸಿ ತಾಣಗಳನ್ನು ಬಿಟ್ಟು ಇದ್ದಕ್ಕಿಂತೆ ಎಲ್ಲ ನಟಿಯರು ಮಾಲ್ಡಿವ್ಸ್ ಗೆ ತೆರಳು ಕಾರಣವೇನು ಎಂಬ ಯೋಚನೆ ಸಹ ತಲೆಯಲ್ಲಿ ಓಡುತ್ತಿದೆ. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ, ಇಲ್ಲಿದೆ ನೋಡಿ ಅಸಲಿ ಸತ್ಯ.

 

View this post on Instagram

 

A post shared by Shanvi sri (@shanvisri)

ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಶುಭ್ರ ಆಕಾಶ, ನೀಲಿ ನೀರಿನ ಸಮುದ್ರ, ತುಂಡುಡುಗೆ ತೊಟ್ಟು ಮರಳಿನ ಮೇಲೆ ಮಲಗಿ ಸೂರ್ಯನ ಕಾಂತಿಗೆ ಮೈವೊಡ್ಡಿದ ಚಿತ್ರಗಳು ರಾರಾಜಿಸುತ್ತಿವೆ. ಇದೇನು ಎಂದೂ ಇಲ್ಲದ ಮಾಲ್ಡಿವ್ಸ್ ಪ್ರೇಮ ಇದ್ದಕ್ಕಿದ್ದಂತೆ ಇಷ್ಟೋಂದು ಪ್ರಮಾಣದಲ್ಲಿ ನಟಿ ಮಣಿಯರಿಗೆ ಬಂದಿದ್ದೇಕೆ ಎಂಬುದು ಹಲವರ ಪ್ರಶ್ನೆಯಾಗಿತ್ತು ಸಹ.

ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ಇದರ ಹಿಂದೆ ಮಾಲ್ಡಿವ್ಸ್ ಪ್ರವಾಸೋದ್ಯಮದ ಕೆಲಸ ಕಾಣತೊಡಗಿದೆ. ಅಂದರೆ ಈ ನಟಿಮಣಿಯರು ಮಾಲ್ಡಿವ್ಸ್ ನಲ್ಲಿ ಮಜಾ ಮಾಡುತ್ತಿರುವುದು ಇವರ ಸ್ವಂತ ಖರ್ಚಿನಿಂದಲ್ಲ ಬದಲಿಗೆ ರೆಸಾರ್ಟ್ ಮಾಲೀಕರ ಕರಾಮತ್ತಿನಿಂದ. ಹೌದು ದ್ವೀಪ ರಾಷ್ಟ್ರವಾಗಿರುವ ಮಾಲ್ಡಿವ್ಸ್ ಮೂಲ ಆದಾಯ ಪ್ರವಾಸೋದ್ಯಮ. ಆದರೆ ಕೊರೊನಾ ವೈರಸ್‍ನಿಂದಾಗಿ ಎಲ್ಲ ಕ್ಷೇತ್ರಗಳಂತೆ ಪ್ರವಾಸೋದ್ಯಮದ ಮೇಲೂ ಹೊಡೆತ ಬಿದ್ದಿದೆ. ಇತ್ತೀಚೆಗೆ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದರೂ ಕೊರೊನಾ ಹಿನ್ನೆಲೆ ಯಾರೂ ಹೋಗುತ್ತಿಲ್ಲ. ಹೀಗಾಗಿ ಅಲ್ಲಿನ ಟೂರಿಸಂ ನೆಲಕಚ್ಚಿದೆ.

ಕುಂಠಿತವಾಗಿರುವ ಪ್ರವಾಸೋದ್ಯಮವನ್ನು ಮೇಲೆತ್ತಲೇಬೇಕು ಎಂಬ ಉದ್ದೇಶದಿಂದ ಅಲ್ಲಿನ ರೆಸಾರ್ಟ್ ಮಾಲೀಕರು ಇನ್ನಿಲ್ಲದ ಪ್ಲಾನ್ ಮಾಡಿದ್ದಾರೆ. ಇದರ ಭಾಗವಾಗಿ ಕಂಡಿದ್ದು, ನಮ್ಮ ಭಾರತೀಯ ಸಿನಿಮಾ ನಟ, ನಟಿಯರು. ಜಾಹೀರಾತುಗಳು ವರ್ಕೌಟ್ ಆಗಲ್ಲ ಎಂಬುದನ್ನು ಅರಿತ ಮಾಲೀಕರು ಮ್ಯಾನೇಜರ್, ಪಿಆರ್ ಗಳ ಮೂಲಕ ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಹೀಗೆ ವಿವಿಧ ಭಾಷೆಗಳ ಸಿನಿಮಾಗಳ ನಟಿಯರನ್ನು ಸಂಪರ್ಕಿಸಿ ಮಾಲ್ಡಿವ್ಸ್ ಗೆ ಆಹ್ವಾನಿಸಿದ್ದಾರೆ. ಈ ಗುಟ್ಟನ್ನು ಬಾಲಿವುಡ್ ನಟರೊಬ್ಬರು ರಟ್ಟು ಮಾಡಿದ್ದು, ಬಾಲಿವುಡ್‍ನಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

 

View this post on Instagram

 

A post shared by disha patani (paatni) (@dishapatani)

ಆಫರ್ ಏನು?
ಡಜನ್‍ಗಟ್ಟಲೇ ನಟಿಯರನ್ನು ಆಹ್ವಾನಿಸಿರುವ ರೆಸಾರ್ಟ್ ಮಾಲೀಕರು ತಾರೆಯರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಆಫರ್ ಮಾಡಿದ್ದಾರೆ. ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಆಯೋಜಕರೇ ಒದಗಿಸಿ ತಂಡೋಪತಂಡವಾಗಿ ನಟಿಮಣಿಯರನ್ನು ಕರೆಸಿಕೊಂಡಿದ್ದಾರೆ. ಇದರೊಂದಿಗೆ ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮೇಲೆತ್ತಲು ಪ್ರಯತ್ನಿಸಿದ್ದಾರೆ.

 

View this post on Instagram

 

A post shared by Sonakshi Sinha (@aslisona)

ಷರತ್ತುಗಳು ಏನ್ ಗೊತ್ತಾ?
ನಟಿ ಮಣಿಯರಿಗೆ ಊಟ, ವಸತಿ, ಶಾಪಿಂಗ್ ಜೊತೆಗೆ ಪ್ರತ್ಯೇಕ ಫೋಟೋಗ್ರಾಫರ್‍ಗಳನ್ನೂ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಷರತ್ತುಗಳನ್ನೂ ವಿಧಿಸಿದ್ದಾರೆ. ಪ್ರತಿ ದಿನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ 2-3 ಫೋಟೋ ಅಪ್‍ಲೋಡ್ ಮಾಡಬೇಕು. ಪ್ರತಿ ಚಿತ್ರಗಳಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು. ಈ ಮೂಲಕ ಮಾಲ್ಡಿವ್ಸ್ ಕೊರೊನಾ ಫ್ರೀ, ಇಲ್ಲಿ ಮಸ್ತ್ ಮಜಾ ಮಾಡಬಹುದು. ಕೊರೊನಾ ಬಂದ ನಂತರ ಮೊದಲ ವಿದೇಶ ಪ್ರವಾಸ ಎಂಬುದನ್ನು ಸಾಬೀತು ಪಡಿಸಬೇಕು ಎಂದು ನಟಿಮಣಿಯರಿಗೆ ತಿಳಿಸಿದ್ದಾರೆ. ಈ ಎಲ್ಲ ಷರತ್ತುಗಳಿಗೆ ಒಪ್ಪಿರುವ ತಾರೆಯರು ತಂಡೋಪತಂಡವಾಗಿ ತೆರಳಿ, ಮಜಾ ಮಾಡುತ್ತಿದ್ದಾರೆ. ಜೊತೆಗೆ ಹಾಟ್ ಫೋಟೋಗಳನ್ನು ಹಾಕುತ್ತಿದ್ದಾರೆ.

ಯಾರೆಲ್ಲ ಹೋಗಿದ್ದಾರೆ?
ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಹಲವು ಮಂದಿ ಸಿನಿಮಾ ಕಲಾವಿದರು ಮಾಲ್ಡಿವ್ಸ್‍ಗೆ ತೆರಳಿದ್ದಾರೆ. ಈ ಪೈಕಿ ಖರ್ಚು ಮಾಡಿ ಹೋದವರು ಮತ್ತು ಉಚಿತವಾಗಿ ಹೋದವರ ಬಗ್ಗೆ ವಿವರ ಸಿಕ್ಕಿಲ್ಲ. ಆದರೆ ಸ್ಯಾಂಡಲ್‍ವುಡ್‍ನ ಶಾನ್ವಿ ಶ್ರೀವಾಸ್ತವ್, ಪ್ರಣಿತಾ, ಬಾಲಿವುಡ್‍ನ ರಾಕುಲ್ ಪ್ರೀತ್ ಸಿಂಗ್ ತಾಪ್ಸಿ ಪನ್ನು, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಇಲಿಯಾನಾ, ಮೌನಿ ರಾಯ್, ಟಾಲಿವುಡ್‍ನ ಸಮಂತಾ, ಕಾಜಲ್ ಅಗರ್‍ವಾಲ್ ಹೀಗೆ ಸಾಲು ಸಾಲು ನಟಿಯರು ವಿಮಾನ ಹತ್ತಿದ್ದಾರೆ.

 

View this post on Instagram

 

A post shared by Rakul Singh (@rakulpreet)

Click to comment

Leave a Reply

Your email address will not be published. Required fields are marked *

www.publictv.in