Wednesday, 22nd January 2020

Recent News

ಕಾಜಲ್ ಅಗರ್ವಾಲ್ ಹೃದಯದಲ್ಲಿ ಕ್ರಿಕೆಟಿಗ

ಹೈದರಾಬಾದ್: ಪಡ್ಡೆ ಹುಡುಗರ ಹಾಟ್ ಫೇವರೇಟ್ ಟಾಲಿವುಡ್ ಮಗಧೀರನ ಸುಂದರಿ ಕಾಜಲ್ ಅಗರ್ವಾಲ್. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಹೆಜ್ಜೆ ಮೂಡಿಸಿರುವ ಕಾಜಲ್ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ತಾನು ಕ್ರಿಕೆಟಿಗ ರೋಹಿತ್ ಶರ್ಮಾರ ದೊಡ್ಡ ಅಭಿಮಾನಿ ಎಂದು ಕಾಜಲ್ ಹೇಳಿಕೊಂಡಿದ್ದಾರೆ.

ಕಾಜಲ್ ತೆಲಗು, ತಮಿಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿ ಅಂಗಳದಲ್ಲಿ ಕಾಜಲ್ ಹೆಸರಿನಿಂದಲೇ ಸಿನಿಮಾಗಳು ಹಿಟ್ ಆಗುತ್ತವೆ. ಇದೀಗ ತಾನು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಭಿಮಾನಿ ಎಂಬ ವಿಷಯ ರಿವೀಲ್ ಆಗಿದೆ.

ಮಗಧೀರ ಕಾಜಲ್ ಅಭಿನಯದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. 2004ರಲ್ಲಿ ಐಶ್ವರ್ಯ ರೈ ಮತ್ತು ವಿವೇಕ್ ಓಬೇರಾಯ್ ನಟನೆಯ ‘ಕ್ಯೂಂ: ಹೋ ಗಯಾ ನಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ನೀಡಿದ್ದರು. ಮೊದಲ ಸಿನಿಮಾ ಕಾಜಲ್ ಗೆ ದೊಡ್ಡ ಪ್ರಮಾಣದ ಹೆಸರು ತಂದು ಕೊಡಲಿಲ್ಲ. 2011ರಲ್ಲಿ ತೆರೆಕಂಡ ಸಿಂಗಂ ಚಿತ್ರದಲ್ಲಿ ನಟ ಅಜಯ್ ದೇವಗನ್ ಗೆ ಜೊತೆಯಾಗಿ ಕಾಜಲ್ ನಟಿಸಿದರು.

ಡಾರ್ಲಿಂಗ್, ಬೃಂದಾವನಂ, ಮಿ.ಪರ್ಫೆಕ್ಟ್, ನಾಯಕ್, ಬಾದ್‍ಶಾ, ಖೈದಿ ನಂಬರ್ 150, ವಿವೇಗಂ, ಸ್ಪೆಶಲ್ 26, ಮೆರ್ಸಲ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ.

Leave a Reply

Your email address will not be published. Required fields are marked *