ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

Advertisements

ಮುಂಬೈ: ನಟಿ ಹಂಸ ನಂದಿನಿ ಕೂದಲು ಇಲ್ಲದ ತಲೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಮೂಲಕ ತಾವು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಘೋಷಣೆ ಮಾಡುವ ಮೂಲಕವಾಗಿ ಅಭಿಮಾನಿಗಳಿ ಶಾಕಿಂಗ್ ಸುದ್ದಿಕೊಟ್ಟಿದ್ದಾರೆ.

Advertisements

ಟ್ವೀಟ್‍ನಲ್ಲಿ ಏನಿದೆ?: ಜೀವನದಲ್ಲಿ ನಡೆಯುವ ಈ ಘಟನೆ ನನಗೆ ಅನ್ಯಾಯವೆಂದು ತೋರುತ್ತದೆಯಾದರೂ, ನಾನು ಬಲಿಪಶು ಆಗೋಕೆ ನಿರಾಕರಿಸುತ್ತೇನೆ. ನನಗೆ ನಾಲ್ಕು ತಿಂಗಳ ಹಿಂದೆ ಸ್ತನ ಕ್ಯಾನ್ಸರ್ ಪತ್ತೆ ಆಯಿತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಾನು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಗುತ್ತದೆ. ಎಲ್ಲಾ ಅಪಾಯಗಳನ್ನು ತೊಡೆದುಹಾಕುವುದು ಅಸಾಧ್ಯ. ಈ ಕ್ಯಾನ್ಸರ್ ಎಂಬ ಅಪಾಯವು ನಾನು ಬದುಕಿರುವವರೆಗೂ ಇರುತ್ತದೆ. ನಾನು ಈಗಾಗಲೇ 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಈ ಥೆರಪಿಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

Advertisements

ಈಗ ಒಂದು ಸ್ತನಕ್ಕೆ ಮಾತ್ರ ಕ್ಯಾನ್ಸರ್ ಇದ್ದು, ಮತ್ತೊಂದು ಸ್ತನಕ್ಕೂ ಈ ಕ್ಯಾನ್ಸರ್ ಹಬ್ಬುವ ಸಾಧ್ಯತೆ ಶೇ. 70 ಇದೆಯಂತೆ ಎಂದು ಬರೆದುಕೊಂಡು ತಮ್ಮ ಆರೋಗ್ಯ ಸ್ಥಿತಿಯ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್

Advertisements

2004ರಲ್ಲಿ ಹಂಸ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2006ರಲ್ಲಿ ತೆರೆಗೆ ಬಂದ ಕನ್ನಡದ ಮೋಹಿನಿ ಸಿನಿಮಾ ಮೂಲಕ ಅವರು ಸ್ಯಾಂಡಲ್‍ವುಡ್‍ಗೂ ಕಾಲಿಟ್ಟರು. ಪ್ರಭಾಸ್ ನಟನೆಯ ಮಿರ್ಚಿ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರೆ, ಸುದೀಪ್ ಅಭಿನಯದ ಈಗ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಅಭಿಮಾನಿಗಳನ್ನ ರಂಜಿಸಿದ್ದರು.

ನಂತರ ಅವರು ಅನಾರೋಗ್ಯದ ಕಾರಣದಿಂದಾಗಿ ಸಿನಿಮಾ, ಸೋಶಿಯಲ್ ಮೀಡಿಯಾಗಳಿಂದ ದೂರವಾಗಿದ್ದ ನಟಿ ಹಂಸ ನಂದಿನಿ ಇದೀಗ ಕ್ಯಾನ್ಸರ್‌ಗೆ ತುತ್ತಾಗಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸುವ ಮೂಲಕ ಸೋಶಿಯಲ್ ಮೀಡಿಯಾಗೆ ವಾಪಸ್ಸಾಗಿದ್ದಾರೆ.

Advertisements
Exit mobile version