Monday, 20th May 2019

Recent News

ಮತ್ತೆ ಭಾವನಾ ಜೊತೆ ಕವಿತಾ?

ಬೆಂಗಳೂರು: ನಟಿ ಭಾವನಾ ಮತ್ತು ನಿರ್ದೇಶಕಿ ಕವಿತಾ ಲಂಕೇಶ್ ದೇವೀರಿ, ಅಲೆಮಾರಿ ಮತ್ತು ಪ್ರೀತಿ ಪ್ರೇಮ ಪ್ರಣಯ ಸಿನಿಮಾಗಳಲ್ಲಿ ಒಂದಾಗಿ ಕೆಲಸ ಮಾಡಿದ್ದವರು. ನಂತರ ಕವಿತಾ ಲಂಕೇಶ್ ಕಮರ್ಷಿಯಲ್ ಸಿನಿಮಾಗಳತ್ತ ಗಮನ ಹರಿಸಿದರೆ, ಭಾವನಾ ಕೂಡಾ ಸಾಂಸ್ಕೃತಿಕ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದರು.

ಈಗ ಮತ್ತೆ ಇಬ್ಬರ ವೃತ್ತಿ ಬದುಕಿಗೂ ಒಂದು ಬದಲಾವಣೆ ಬೇಕಿದೆ. ಈ ಸಂದರ್ಭದಲ್ಲಿ ಮತ್ತೆ ಕವಿತಾ ಮತ್ತು ಭಾವನಾ ಜೊತೆ ಸೇರಿ ಸಿನಿಮಾವೊಂದನ್ನು ಮಾಡುವ ಸಿದ್ಧತೆಯಲ್ಲಿದ್ದಾರೆ. ಇದರ ಸೂಚನೆಯನ್ನು ಸ್ವತಃ ಕವಿತಾ ಲಂಕೇಶ್ ಬಿಟ್ಟುಕೊಟ್ಟಿದ್ದಾರೆ. ಫೇಸ್‍ಬುಕ್ಕಿನಲ್ಲಿ ತಾವಿಬ್ಬರೂ ಒಟ್ಟಿಗಿರುವ ಫೋಟೋವೊಂದನ್ನು ಟ್ಯಾಗ್ ಮಾಡಿ `ಬಹಳ ವರ್ಷಗಳ ನಂತರ ಪ್ರತಿಭಾವಂತೆ ಮತ್ತು ಬ್ಯೂಟಿಫುಲ್ ಆಗಿರುವ ಭಾವನಾ ಅವರನ್ನು ಭೇಟಿಯಾಗಿದ್ದೇನೆ. ಹಿಂದೆ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಾವು ಶೀಘ್ರದಲ್ಲೇ ಮತ್ತೊಂದು ಸಿನಿಮಾದಲ್ಲಿ ಒಟ್ಟಾಗಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಸರಿಸುಮಾರು ಹದಿನೈದು ವರ್ಷಗಳ ಹಿಂದೆ ಜೊತೆಯಾಗಿದ್ದ ಈ ಜೋಡಿ ಮತ್ತೆ ಸಿನಿಮಾ ಮಾಡಲಿರುವುದು ನಿಜಕ್ಕೂ ಖುಷಿಯ ವಿಚಾರ. ಆದಷ್ಟು ಬೇಗ ಕವಿತಾ ಲಂಕೇಶರ ಪ್ಲಾನು ಕಾರ್ಯರೂಪಕ್ಕೆ ಬರುವಂತಾಗಲಿ.

 

Leave a Reply

Your email address will not be published. Required fields are marked *