Connect with us

Crime

ಅಪಾರ್ಟ್‌ಮೆಂಟ್‌ನಿಂದ ಜಿಗಿದು ನಟಿ ಆತ್ಮಹತ್ಯೆ

Published

on

ಮುಂಬೈ: ನಟಿಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಮಹಾರಾಷ್ಟ್ರದ ಒಶಿವಾರಾದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ನಟಿಯನ್ನು ಪರ್ಲ್ ಪಂಜಾಬಿ ಎಂದು ಗುರುತಿಸಲಾಗಿದೆ. ಪರ್ಲ್ ಮಹತ್ವಾಕಾಂಕ್ಷಿ ನಟಿ ಹಾಗೂ ಮಾಡೆಲ್ ಆಗಿದ್ದು, ಬಾಲಿವುಡ್‍ನಲ್ಲಿ ಎಂಟ್ರಿ ಕೊಡಲು ಬಹಳ ಪ್ರಯತ್ನಿಸುತ್ತಿದ್ದಳು. ಆದರೆ ಪರ್ಲ್ ಇದರಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಇದರಿಂದ ಆಕೆ ಮನನೊಂದಿದ್ದಳು.

ಈ ಬಗ್ಗೆ ಪ್ರತಿಕ್ರಿಯಿಸಿದ ಸೆಕ್ಯೂರಿಟಿ ಗಾರ್ಡ್ ಬಿಪಿನ್ ಕುಮಾರ್ ಠಾಕೂರ್, “ಈ ಘಟನೆ ರಾತ್ರಿ ಸುಮಾರು 12.15 ರಿಂದ 12.30 ನಡುವೆ ನಡೆದಿದೆ. ಈ ವೇಳೆ ಯಾವುದೋ ಶಬ್ಧವೊಂದು ಕೇಳಿಸಿತ್ತು. ರಸ್ತೆಯಲ್ಲಿ ಯಾರೋ ಕೂಗುತ್ತಿದ್ದಾರೆ ಎಂದು ನಾನು ಭಾವಿಸಿದೆ. ಬಳಿಕ ಏನಾಗಿದೆ ಎಂದು ಪರಿಶೀಲಿಸಲು ಅಲ್ಲಿಗೆ ಹೋದೆವು. ಆಗ ಅಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಅಲ್ಲದೆ ಅಪಾರ್ಟ್‌ಮೆಂಟ್‌ ನ ಮೂರನೇ ಮಹಡಿಯಲ್ಲೂ ಕೂಡ ಯಾವುದೋ ಶಬ್ಧ ಕೇಳಿಸುತ್ತಿತ್ತು” ಎಂದು ಹೇಳಿದ್ದಾರೆ.

ನಟಿ ಪರ್ಲ್ ಪಂಜಾಬಿ ಬಾಲಿವುಡ್‍ನಲ್ಲಿ ಅವಕಾಶ ಸಿಗದ ಕಾರಣ ಮಾನಸಿಕವಾಗಿ ನೊಂದಿದ್ದಳು. ಅಲ್ಲದೆ ಪದೇ ಪದೇ ತನ್ನ ತಾಯಿಯ ಜೊತೆ ಜಗಳವಾಡುತ್ತಿದ್ದಳು. ಈ ಹಿಂದೆ ಕೂಡ ಆಕೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಸಮಯಕ್ಕೆ ಸರಿಯಾಗಿ ಯಾರಾದರೂ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಒಶಿವಾರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.