Connect with us

Cinema

ಮನೆಯ ಹೊಸ ವ್ಯಕ್ತಿಯನ್ನು ಪರಿಚಯಿಸಿದ್ರು ಅನು ಪ್ರಭಾಕರ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನೆಯ ಹೊಸ ವ್ಯಕ್ತಿಯ ಫೋಟೋ ಹಾಕಿ ಎಲ್ಲರನ್ನು ಪರಿಚಯಿಸಿದ್ದಾರೆ.

ಅನು ಪ್ರಭಾಕರ್ ಅವರು ತಮ್ಮ ಪತಿ, ನಟ ರಘು ಮುಖರ್ಜಿ ಹಾಗೂ ಮಗಳ ಜೊತೆಯಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮೆಲ್ಲರಿಗೂ ಪರಿಚಯಿಸುತಿದ್ದೀವಿ ನಮ್ಮ ಮಗಳು `ನಂದನ ಪ್ರಭಾಕರ್ ಮುಖರ್ಜಿ'” ಎಂದು ಬರೆದು ಮೂವರ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ನಟಿ ಪ್ರಿಯಾಂಕ ಉಪೇಂದ್ರ ಅವರು ರೀ-ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕ ತಮ್ಮ ಟ್ವಿಟ್ಟರಿನಲ್ಲಿ, “ಶುಭಾಶಯಗಳು. ದೇವರು ಆಕೆಯ ಜೀವನದಲ್ಲಿ ಸಾಕಷ್ಟು ಖುಷಿ ಹಾಗೂ ಪ್ರೀತಿಯನ್ನು ನೀಡಲಿ” ಎಂದು ರೀ-ಟ್ವೀಟ್ ಮಾಡಿದ್ದಾರೆ.

ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಎರಡನೇ ಮದುವೆಯಾಗಿದೆ. ಅನು ಅವರು ಅಗಸ್ಟ್ 15, 2018ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಕಳೆದ ವರ್ಷ ದೀಪಾವಳಿ ಹಬ್ಬದಂದು ರಘು ಮುಖರ್ಜಿ ಅವರು ತಮ್ಮ ಟ್ವಿಟ್ಟರಿನಲ್ಲಿ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಘು ಮುಖರ್ಜಿ ಅವರ ಜೊತೆ ಅನು ಪ್ರಭಾಕರ್ ಕೂಡ ಇದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv