ಮತ್ತೆ ವೈರಲ್‌ ಆಯ್ತು ಆಲಿಯಾ ಭಟ್ ಬೇಬಿ ಬಂಪ್ ಫೋಟೋ

Advertisements

ಬಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ಸಂಚಲನ ಮೂಡಿಸುತ್ತಿರುವ ನಟಿ ಆಲಿಯಾ ಭಟ್ ಸದ್ಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಟಿಯ ಬೇಬಿ ಬಂಪ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Advertisements

ಹಿಂದಿ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ ಭಟ್ ಸಿನಿಮಾಗಿಂತ ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಗಳಿಂದ ಸಖತ್ ಸುದ್ದಿಯಾಗುತ್ತಿದ್ದಾರೆ. ಸದ್ಯ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಚಾರದ ಸಂದರ್ಭದಲ್ಲಿ ನಟಿ ಆಲಿಯಾ ಅವರ ಬೇಬಿ ಬಂಪ್ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.

Advertisements

ಪತಿ ರಣ್‌ಬೀರ್ ಕಪೂರ್ ಮತ್ತು ನಿರ್ದೇಶಕ ಆಯಾನ್ ಮುಖರ್ಜಿ ಜತೆ ಸಿನಿಮಾ ಪ್ರಚಾರ ಕಾರ್ಯದಲ್ಲಿ ಆಲಿಯಾ ಭಾಗಿಯಾಗಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಖುಷಿ ಖುಷಿಯಾಗಿ ನಟಿ ಪೋಸ್ ನೀಡಿದ್ದಾರೆ. ತಾಯ್ತನದ ಖುಷಿಯಲ್ಲಿರುವ ಆಲಿಯಾ ಇದೀಗ ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

Live Tv

Advertisements
Advertisements
Exit mobile version