Connect with us

Crime

ತಾಯಿಗೆ ಮೆಸೇಜ್ ಮಾಡಿ ಕಿರುತೆರೆ ನಟಿ ಆತ್ಮಹತ್ಯೆ

Published

on

ಚೆನ್ನೈ: ತಮಿಳಿನ ಖ್ಯಾತ ನಟಿ ಯಶಿಕಾ ತನ್ನ ತಾಯಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿರುವ ಪೆರಾವಲೂರ್ ನಲ್ಲಿ ನಡೆದಿದೆ.

ಯಶಿಕಾ ಮೂಲ ಹೆಸರು ಮೇರಿ ಶೀಲಾ ಜೀಬ್ರಾನಿ ಆಗಿದ್ದು, ವದಪಾಲಾನಿಯ ಹಾಸ್ಟೆಲ್‍ವೊಂದರಲ್ಲಿ ವಾಸಿಸುತ್ತಿದ್ದರು. ಈ ವೇಳೆ ಆಕೆ ಮೋಹನ್ ಬಾಬು ಅಲಿಯಾಸ್ ಅರವಿಂದ್‍ನನ್ನು ಪ್ರೀತಿಸಲು ಶುರು ಮಾಡಿದ್ದರು.

ಯಶಿಕಾ ಹಾಗೂ ಮೋಹನ್ ಇಬ್ಬರು ಪ್ರೀತಿಸಲು ಶುರು ಮಾಡಿ ಕೆಲವೇ ತಿಂಗಳಿನಲ್ಲಿ ಪೇರವಲೂರ್ ನ ಜಿಕೆಎಮದ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಇತ್ತೀಚೆಗೆ ಇವರಿಬ್ಬರ ನಡುವೆ ಜಗಳವಾಗಿ ಮೋಹನ್ ಮನೆ ಬಿಟ್ಟು ಹೋಗಿದ್ದನು ಎಂದು ಹೇಳಲಾಗುತ್ತಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯಶಿಕಾ ತನ್ನ ತಾಯಿಗೆ ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಿದ್ದು, ಮೋಹನ್ ಬಾಬು ನನ್ನನ್ನು ಮದುವೆ ಆಗಲು ನಿರಾಕರಿಸಿದ್ದಾನೆ. ಅಲ್ಲದೇ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದಾರೆ.

ನಾವು ಮೋಹನ್ ಬಾಬು ವಿರುದ್ಧ ದೂರನ್ನು ದಾಖಲಿಸಿಕೊಂಡು ಆತನಿಗಾಗಿ ಹುಡುಕಾಡುತ್ತಿದ್ದೇವೆ. ಆತ ಸಿಕ್ಕಿದ ಮೇಲೆ ಯಶಿಕಾ ಸಾವಿನ ರಹಸ್ಯ ಗೊತ್ತಾಗುತ್ತದೆ. ಯಶಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೆರಾವಲೂರ್ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv