Tuesday, 17th September 2019

Recent News

ಒಂದು ಫೋಟೋ, ಸಾವಿರ ಭಾವನೆ – ಯಶ್ ಇನ್‍ಸ್ಟಾಗ್ರಾಂನಲ್ಲಿ ಮೊದ್ಲ ಸೆನ್ಸೇಷನಲ್ ಫೋಟೋ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಎರಡು ದಿನಗಳ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆಗೆದು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈಗ ಇನ್‍ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ನಟ ಯಶ್ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಹಾಕುವ ಮೂಲಕ ತಮ್ಮ ಖಾತೆಯನ್ನು ಓಪನ್ ಮಾಡಿದ್ದರು. ಭಾನುವಾರ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಇತ್ತು. ಆದ್ದರಿಂದ ಅಂದಿನ ದಿನವೇ ತಮ್ಮ ಮುದ್ದಿನ ಮಗಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮದುವೆ ವಾರ್ಷಿಕೋತ್ಸವದ ಶುಭಾಶಯವನ್ನು ಸಾವಿರಾರು ಭಾವನೆಯನ್ನು ಹೇಳುವಂತಹ ಒಂದು ಫೋಟೋವನ್ನು ಪೋಸ್ಟ್ ಮಾಡಿ ಪತ್ನಿ ರಾಧಿಕಾ ಅವರಿಗೆ ತಿಳಿಸಿದ್ದಾರೆ.

ಯಶ್ ಅವರು ರಾಧಿಕಾ ಪಂಡಿತ್ ಗರ್ಭಿಣಿಯಾಗಿದ್ದಾಗ ಮಾಲ್ಡೀವ್ಸ್ ಗೆ ಹೋಗಿ ಬೇಬಿ ಮೂನ್ ಫೋಟೋ ಶೂಟ್ ಮಾಡಿಸಿದ್ದರು. ಕಡಲತೀರದಲ್ಲಿ ಚಂದಿರ ಅವರಿಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ಕಾಣುತ್ತಿದ್ದು, ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜನೆ ಮಾಡಲಾಗಿತ್ತು. ಅಲ್ಲಿ ಯಶ್ ತಮ್ಮ ಎರಡು ಕೈಗಳನ್ನು ರಾಧಿಕಾರ ಹೊಟ್ಟೆ ಮೇಲೆ ಇಟ್ಟು, ರಾಧಿಕಾ ಪಂಡಿತ್ ಅವರ ಹಣೆಗೆ ಮುತ್ತು ಕೊಟ್ಟಿದ್ದಾರೆ. ಇದು ಫೋಟೋದಲ್ಲಿ ಸೆರೆಯಾಗಿದೆ. ಈ ಮೂಲಕ ಸದಾ ನಿನ್ನನ್ನು ಮತ್ತು ಮಗುವನ್ನು ಪ್ರೀತಿಯಿಂದ ಕಾಪಾಡುತ್ತೇನೆ ಅಥವಾ ನೀವಿಬ್ಬರು ನನ್ನ ಜೀವನದಲ್ಲಿ ಮುಖ್ಯವಾಗಿದ್ದೀರಿ ಎಂಬ ಭಾವನೆಯನ್ನು ಫೋಟೋ ಹೇಳುತ್ತಿದೆ. ಈ ಕಡಲತೀರದಲ್ಲಿ ಆ ಚಂದ್ರನ ಸಾಕ್ಷಿಯಾಗಿ ನಿನ್ನನ್ನು ಮತ್ತು ಮಗುವನ್ನು ಕಾಪಾಡುವ ಹೊಣೆ ನನ್ನದು. ಈ ಸುಂದರ ಕ್ಷಣಕ್ಕೆ ಈ ಮುತ್ತು ನೀಡುವ ಮೂಲಕ ಮಾತುಕೊಡುತ್ತಿದ್ದೇನೆ ಎಂಬದನ್ನು ಫೋಟೋದಲ್ಲಿ ನಾವು ಕಾಣಬಹುದು.

ಈ ಫೋಟೋ ಹಾಕಿ, “ಈ ಎರಡು ವರ್ಷ ನನ್ನ ಜೀವನದ ಅತ್ಯುತ್ತಮ ವರ್ಷಗಳಾಗಿದೆ. ನೀನು ನನಗೆ ಉತ್ತಮವಾದ ಉಡುಗೊರೆ ಕೊಟ್ಟಿದ್ದೀಯಾ, ಇದು ನನ್ನ ಹೊಸ ಜೀವನ ಮತ್ತು ಹೊಸ ಜೀವನದ ಪ್ರಯಾಣವಾಗಿದೆ. ನನ್ನ ಪ್ರೀತಿಗೆ ಮದುವೆ ಶುಭಾಶಯಗಳು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇದೇ ಡಿಸೆಂಬರ್ 2 ರಂದು ಹೆಣ್ಣು ಮಗುವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *