Bengaluru City
ಅಭಿಮಾನಿಗಳಲ್ಲಿ ರಾಕಿ ಬಾಯ್ ವಿಶೇಷ ಮನವಿ

ಬೆಂಗಳೂರು: ಜನವರಿ 8ರಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಲನಚಿತ್ರದ ಟ್ರೇಲರ್ನ್ನು 10ಗಂಟೆ 18 ನಿಮಿಷಕ್ಕೆ ಹೊಂಬಾಳೆ ಪೇಜ್ನಲ್ಲಿ ಬಿಡುಗಡೆ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ಘೋಷಿಸಿದ್ದಾರೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಯಶ್ ತಮ್ಮ ಹುಟ್ಟುಹಬ್ಬದ ಸಿಹಿ ಹಂಚಲಿದ್ದಾರೆ.
ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವಾಗಿದ್ದು, ಈ ಬಾರಿ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ತಮ್ಮನ್ನು ಮುಖಾಮುಖಿ ಭೇಟಿ ಮಾಡದೇ ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಸುವಂತೆ ಯಶ್ ಅಭಿಮಾನಿಗಳೊಂದಿಗೆ ಕೇಳಿಕೊಂಡಿದ್ದಾರೆ.
View this post on Instagram
ಪ್ರತಿ ವರ್ಷ ಹುಟ್ಟುಹಬ್ಬದಂದು ಸಾವಿರಾರೂ ಸಂಖ್ಯೆಯಲ್ಲಿ ಸೇರಿ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾನ ಕರಿ ಛಾಯೆ ಆವರಿಸಿಕೊಂಡಿರುವ ಕಾರಣದಿಂದಾಗಿ ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಮೂಲ ಸ್ಥಳಗಳಲ್ಲೇ ಇದ್ದು ಅಲ್ಲಿಂದಲೇ ಶುಭಹಾರೈಕೆ ಮಾಡಬೇಕೆಂದು ಇನ್ಟಾಗ್ರಾಂ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.
View this post on Instagram
ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನ ಮೇಲೆ ಇದೇ ರೀತಿ ಮುಂದುವರಿಯಲಿ. ಕೊರೊನಾ ಸಾಂಕ್ರಾಮಿಕ ರೋಗ ಮತ್ತೆ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿದೆ. ಜನಸಂಖ್ಯೆ ಹೆಚ್ಚಾಗಿ ಸೇರುವುದರಿಂದ ನಿಮಗೆ ಅಪಾಯ ಹೆಚ್ಚು. ನಿಮಗೆ ಅಪಾಯವಾದರೆ ನನಗೆ ಅದರಿಂದ ತುಂಬಾ ನೋವಾಗುತ್ತದೆ. ಹಾಗಾಗಿ ಈ ಬಾರಿ ನನ್ನ ಮನವಿಯಂತೆ ನಡೆದುಕೊಳ್ಳಿ ಎಂದು ಆಭಿಮಾನಿಗಳೊಂದಿಗೆ ಯಶ್ ಮನವಿ ಮಾಡಿಕೊಂಡಿದ್ದಾರೆ.
