Connect with us

Bengaluru City

ರಾಕಿಭಾಯ್ ಹೊಸ ಗೆಟಪ್‍ಗೆ ಅಭಿಮಾನಿಗಳು ಶಾಕ್

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸದ್ದು ಮಾಡಿತ್ತು. ಇದೀಗ ಯಶ್ ‘ಕೆಜಿಎಫ್-2’ ಚಿತ್ರಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಅವರ ಫೋಟೋವೊಂದು ರಿಲೀಸ್ ಆಗಿದೆ.

ನಟ ಯಶ್ ‘ಕೆಜಿಎಫ್-2’ ಸಿನಿಮಾದಲ್ಲಿ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳಲ್ಲಿ ಕೂತುಹಲ ಮೂಡಿತ್ತು. ಆದರೆ ಪಾರ್ಟ್-2 ನಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಒಂದು ಝಲಕನ್ನು  ಅಭಿಮಾನಿಗಳಿಗೆ ತೋರಿಸಿದ್ದಾರೆ.

ಮೊದಲ ಭಾಗದಲ್ಲಿ ಯಶ್ ಗಡ್ಡಧಾರಿಯಾಗಿ ಅಬ್ಬರಿಸಿದ್ದು, ಸಿನಿಮಾದಲ್ಲಿ ಅವರ ಗಡ್ಡಕ್ಕೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಎರಡನೇ ಭಾಗದಲ್ಲಿ ಯಶ್ ಅವತಾರ ಭಯಾನಕವಾಗಿದೆ. ಈ ಬಿಡುಗಡೆಯಾಗಿರುವ ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಉದ್ದ ದಾಡಿ ಬಿಟ್ಟಿದ್ದು, ಕನ್ನಡಿ ಮುಂದೆ ನಿಂತು ಅವರೇ ಫೋಟೋ ಸೆರೆಹಿಡಿದಿದ್ದಾರೆ. ಈದೀಗ ಈ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಸದ್ಯಕ್ಕೆ ರಿಲೀಸ್ ಆಗಿರುವ ಯಶ್ ಅವತಾರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‘ಕೆಜಿಎಫ್-2’ ಶೂಟಿಂಗನ್ನು ಕೆಲವು ದಿನಗಳು ಮುಂದೂಡಲಾಗಿತ್ತು. ಇದೇ ತಿಂಗಳು 13ರಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ.