Connect with us

Bollywood

ಜನವರಿ 24ಕ್ಕೆ ವರುಣ್ ಧವನ್ ಮದುವೆ?

Published

on

ಮುಂಬೈ: ಬಾಲಿವುಡ್ ಸ್ಟುಡೆಂಟ್ ಆಫ್ ದಿ ಇಯರ್ ಹುಡುಗ ವರುಣ್ ಧವನ್ ಇದೇ ಜನವರಿ 24ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಬಹುದಿನಗಳ ಗೆಳತಿ ನತಾಶ ದಲಾಲ್ ಜೊತೆ ವರುಣ್ ಹಾರ ಬದಲಿಸಿಕೊಳ್ಳಲಿದ್ದಾರೆ. ಜನವರಿ 22ರಿಂದ ಮದುವೆ ಶಾಸ್ತ್ರಗಳು ನಡೆಯಲಿವೆ. ಕೊರೊನಾ ಹಿನ್ನೆಲೆ ಮದುವೆಗೆ ಕೇವಲ ಆಪ್ತರನ್ನ ಮಾತ್ರ ಆಹ್ವಾನಿಸಲು ಧವನ್ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಮದುವೆ ದಿನಾಂಕದ ಕುರಿತು ವರುಣ್ ಧವನ್ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

ಧವನ್ ಮತ್ತು ದಲಾಲ್ ಕುಟುಂಬದಲ್ಲಿ ಮದುವೆ ಸಿದ್ಧತೆಗಳ ಆಧಾರದ ಮೇಲೆ ವಾಹಿನಿ ಸುದ್ದಿಯನ್ನ ಪ್ರಕಟಿಸಿದೆ. ವರುಣ್ ಮತ್ತು ನತಾಶ 2020ರಲ್ಲಿಯೇ ಮದುವೆ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರು. ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ಮದುವೆ ಮುಂದೂಡಿಕೆಯಾಗಿತ್ತು.

ಕೆಲ ದಿನಗಳ ಹಿಂದೆ ವರುಣ್ ಧವನ್ ನಟನೆಯ ಕೂಲಿ ನಂಬರ್ 1 ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ವರುಣ್ ಗೆ ಜೊತೆಯಾಗಿ ಸಾರಾ ನಟಿಸಿದರು. ಆದ್ರೆ ಸಿನಿಮಾ ಪ್ರೇಕ್ಷಕರನ್ನ ತಲುಪವಲ್ಲಿ ವಿಫಲವಾಗಿತ್ತು. ಚಿತ್ರದಲ್ಲಿ ಸ್ಟ್ರೀಟ್ ಡ್ಯಾನ್ಸರ್ ಪಾತ್ರದಲ್ಲಿ ವರುಣ್ ನಟಿಸಿದ್ದರು.

Click to comment

Leave a Reply

Your email address will not be published. Required fields are marked *