Connect with us

Cinema

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಮತ್ತೊಬ್ಬ ಸ್ಯಾಂಡಲ್‍ವುಡ್ ನಟ

Published

on

ಬೆಂಗಳೂರು: ಇತ್ತೀಚೆಗೆ ದೂದ್ ಪೇಡ ದಿಗಂತ್ ಹಾಗೂ ಐಂದ್ರಿತಾ ರೈ ಮದುವೆಯಾಗಲಿದ್ದೇವೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಸದ್ಯ ದಿಗಂತ್ ಹಾಗೂ ಐಂದ್ರಿತಾ ಮದುವೆ ದಿನವೇ ಸ್ಯಾಂಡಲ್‍ವುಡ್ ಮತ್ತೊಬ್ಬ ನಟ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸುಮಂತ್ ಶೈಲೇಂದ್ರ ಅವರು ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗನಾಗಿದ್ದು, ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ವಿವಾಹ ಜರುಗಲಿದ್ದು, ಡಿಸೆಂಬರ್ 11ರಂದು ಬೆಂಗಳೂರು ಪ್ಯಾಲೇಸ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸದ್ಯ ಸುಮಂತ್ ಅವರು ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.

ಶ್ರೀನಿವಾಸ್ ಮತ್ತು ಚಂದ್ರಕಲಾ ಅವರ ಪುತ್ರಿ ಅನಿತಾ ಅವರನ್ನು ಸುಮಂತ್ ಮದುವೆಯಾಗಲಿದ್ದಾರೆ. ಈ ವಿಷಯ ಬಿಟ್ಟರೆ ಸುಮಂತ್ ಅವರ ಮದುವೆ ಬಗ್ಗೆ ಹಾಗೂ ಅವರು ಮದುವೆಯಾಗುತ್ತಿರುವ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸುಮಂತ್ ‘ಆಟ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದು, ಆ ನಂತರ ರಾಧಿಕಾ ಪಂಡಿತ್ ಅವರ ಜೊತೆ ‘ದಿಲ್‍ವಾಲಾ’ ಹಾಗೂ ಕೃತಿ ಕರಬಂಧ ಜೊತೆ ‘ತಿರುಪತಿ ಎಕ್ಸಪ್ರೆಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv