Connect with us

Bengaluru City

ಗಾಯಕಿ ಜೊತೆ ‘ಹೆಬ್ಬುಲಿ’ ವಿಲನ್ ನಿಶ್ಚಿತಾರ್ಥ -ಫನ್ನಿ ಟ್ವೀಟ್ ಮಾಡಿದ ಕಿಚ್ಚ

Published

on

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ನಟ ಕಬೀರ್ ದುಹಾನ್ ಸಿಂಗ್ ಅವರು ಗಾಯಕಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟ ಕಬೀರ್ ದುಹಾನ್ ಸಿಂಗ್ ಅವರು ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಡಾಲಿ ಸಿಂಧು ಅವರೊಂದಿಗೆ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‍ಮೆಂಟ್ ಫೋಟೋಗಳನ್ನು ದುಹಾನ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಇಬ್ಬರು ನಿಶ್ಚಿತಾರ್ಥ ಉಡುಪಿನಲ್ಲಿ ಮಿಂಚಿದ್ದಾರೆ. ಈ ನವಜೋಡಿಗೆ ಬಾಲಿವುಡ್ ಸಿನಿತಾರೆಯರು ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ಕೋರುತ್ತಿದ್ದಾರೆ.

ನಟ ಸುದೀಪ್ ಕೂಡ ದುಹಾನ್ ಸಿಂಗ್ ಅವರಿಗೆ ವಿಶ್ ಮಾಡಿದ್ದು, “ಅವರು ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನೀವು ಚೆನ್ನಾಗಿ ಫಿಟ್ ಆಗಿ ಕಾಣುವಂತೆ ನಿಮ್ಮ ಪತ್ನಿ ಚೆನ್ನಾಗಿ ಅಡುಗೆ ಮಾಡಿ ಊಟ ಮಾಡಿಸಲಿದ್ದಾರೆ. ಇಬ್ಬರಿಗೂ ಶುಭಾಶಯಗಳು ಚಿಯರ್ಸ್” ಎಂದು ಸುದೀಪ್ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ 2017ರಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾದ ಮೂಲಕ ನಟ ಕಬೀರ್ ದುಹಾನ್ ಸಿಂಗ್ ಅವರು ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ‘ಪೈಲ್ವಾನ್’ ಚಿತ್ರದಲ್ಲೂ ನಟ ಕಬೀರ್ ಸಿಂಗ್ ದುಹಾನ್ ಅವರು ನಟಿಸಿದ್ದಾರೆ.