Connect with us

Cinema

ನೀವು ನಿಜಕ್ಕೂ ದೇವರ ತದ್ರೂಪಿ – ಕೊಟ್ಟ ಮಾತಿನಂತೆ ಶಸ್ತ್ರಚಿಕಿತ್ಸೆಗೆ ಸೋನು ಸೂದ್ ಸಹಾಯ

Published

on

– ಮನವಿ ಮಾಡಿದ ಎರಡೇ ದಿನದಲ್ಲಿ ಸ್ಪಂದನೆ
– ಮತ್ತೊಂದು ಯಶಸ್ವಿ ಶಸ್ತ್ರಚಿಕಿತ್ಸೆ

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಕೊರೊನಾ ಹಿನ್ನೆಲೆ ಲಾಕ್‍ಡೌನ್ ಆದಾಗಿನಿಂದಲೂ ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ತಮ್ಮ ಬಳಿ ಸಹಾಯ ಕೇಳುವ ಪ್ರತಿಯೊಬ್ಬರಿಗೂ ಸಹಾಯದ ಹಸ್ತ ಚಾಚುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಮತ್ತೊಂದು ಮಾನವೀಯ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ತಾಯಿಯ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಸೋನು ಸೂದ್

ಅರ್ಜುನ್ ಚೌಹಣ್ ಎಂಬವರ ಶಸ್ತ್ರ ಚಿಕಿತ್ಸೆಗೆ ನಟ ಸೋನು ಸೂದ್ ಸಹಾಯ ಮಾಡಿದ್ದಾರೆ. ಅರ್ಜುನ್ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಪರದಾಡುತ್ತಿದ್ದರು. ಯಾರೊಬ್ಬರು ಸಹಾಯಕ್ಕೆ ಬರದಿದ್ದಾಗ ಸೋನು ಸೂದ್ ಅವರ ಬಳಿ ಟ್ವಿಟ್ಟರ್ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಸೋನು ಸೋದ್ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

ಅರ್ಜುನ್ ಚೌಹಣ್ ಸೆಪ್ಟೆಂಬರ್ 14 ರಂದು ಸೋನು ಸೂದ್‍ಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. “ನಮಸ್ತೆ ಸೂನು ಸರ್, ನಾನು ನಿಮಗೆ ಕೆಲವು ವೈದ್ಯಕೀಯ ಸಹಾಯವನ್ನು ಕೋರುತ್ತೇನೆ. ನನಗೆ ಆದಷ್ಟು ಬೇಗ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯವಿದೆ. ಆದರೆ ಪ್ರಸ್ತುತ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲಾರೆ. ಆದ್ದರಿಂದ ನೀವು ನನಗೆ ಸಹಾಯ ಮಾಡಬಹುದೇ ಎಂದು ದಯವಿಟ್ಟು ನೋಡಿ. ಅಗತ್ಯವಿದ್ದರೆ ಲಗತ್ತಿಸಲಾದ ವರದಿಗಳನ್ನು ಸಹ ನೋಡಿ” ಎಂದು ವೈದ್ಯರ ವರದಿ ಲಗತ್ತಿಸಿ ತಿಳಿಸಿದ್ದರು. ಇದನ್ನೂ ಓದಿ: 30 ವರ್ಷ, 3 ಕಿ.ಮೀ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತನಿಗೆ ಆನಂದ್ ಮಹೀಂದ್ರಾ ಗಿಫ್ಟ್

ಎರಡು ದಿನದ ಬಳಿಕ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್ “ನಿಮ್ಮ ವರದಿಯನ್ನು ವೈದ್ಯರೊಂದಿಗೆ ಹಂಚಿಕೊಂಡಿದ್ದೇನೆ. ನಿಮ್ಮ ಬ್ಯಾಗ್‍ಗಳನ್ನು ಪ್ಯಾಕ್ ಮಾಡಿಕೊಳ್ಳಿ. ಸೋಮವಾರ ನಿಮ್ಮ ಶಸ್ತ್ರಚಿಕಿತ್ಸೆ” ಎಂದು ಭರವಸೆ ನೀಡಿದ್ದರು. ಅದರಂತೆಯೇ ಸೋನು ಸೂದ್ ಅವರ ಸಹಾಯದ ಪರಿಣಾಮ ಅರ್ಜುನ್ ಚೌಹಣ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.

ಈ ಕುರಿತು ಸ್ವತಃ ಸೋನು ಸೂದ್ ಮಾಹಿತಿ ನೀಡಿದ್ದಾರೆ. ಮತ್ತೊಂದು ಯಶಸ್ವಿ ಶಸ್ತ್ರಚಿಕಿತ್ಸೆ, ಇದು ಭಾನುವಾರದ ವಿಶೇಷ. ನಿಮ್ಮಂತ ಸೂಪರ್ ಹೀರೋ ನಮಗೆ ಬೇಕು. ಎಂದು ಕರ್ನೂಲ್‍ನ ವಿರ್ಕ್ ಆಸ್ಪತ್ರೆಯ ವೈದ್ಯ ಅಮಾನ್ ಪ್ರೀತ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಅರ್ಜುನ್ ಚೌಹಣ್ ಸಹ ಟ್ವೀಟ್ ಮಾಡುವ ಮೂಲಕ ಸೋನು ಸೂದ್ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸೋನು ಸೂದ್ ಸರ್ ಕಳೆದ 4 ತಿಂಗಳುಗಳಿಂದ ನನಗೆ ಎಲ್ಲಾ ಬಾಗಿಲುಗಳು ಮುಚ್ಚಿತ್ತು. ಯಾರಿಂದಲೂ ಒಂದೇ ಒಂದು ಪ್ರತಿಕ್ರಿಯೆ ಸಿಗಲಿಲ್ಲ. ನಂತರ ನಾನು ನಿಮ್ಮ ಸಹಾಯದ ಬಗ್ಗೆ ಕೇಳಿದ್ದೆ. ಆದ್ದರಿಂದ ನಿಮ್ಮನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದೆ. ನೀವು ವೈದ್ಯರೊಂದಿಗೆ ಮಾತನಾಡಿ ಕರ್ನೂಲ್‍ನಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದೀರಿ. ಇದನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ. ನೀವು ನಿಜಕ್ಕೂ ದೇವರ ತದ್ರೂಪಿ” ಎಂದು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *