Connect with us

Cinema

ಸೋನು ಸೂದ್‍ರಿಂದ ಚಂಡಮಾರುತಕ್ಕೆ ಸಿಲುಕಿದ್ದ 28 ಸಾವಿರ ನಿರಾಶ್ರಿತರ ರಕ್ಷಣೆ

Published

on

ಮುಂಬೈ: ನಟ ಸೋನು ಸೂದ್ ಇತ್ತೀಚೆಗಷ್ಟೆ ಸಾವಿರಾರು ವಲಸೆ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ತಲುಪಿಸಲು ಬಸ್ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ನಂತರ ಸುಮಾರು 177 ಯುವತಿಯನ್ನು ರಕ್ಷಿಸಿ ಅವರ ತವರು ಜಿಲ್ಲೆಗೆ ಕಳುಹಿಸಲು ಸಹಾಯ ಮಾಡಿದ್ದರು. ಇದೀಗ ನಿಸರ್ಗ ಚಂಡಮಾರುತ್ತಕ್ಕೆ ಸಿಲುಕಿದ ಕುಟುಂಬದವರಿಗೆ ನೆರವಾಗಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಸೇವೆ ಮೆಚ್ಚಿ ರಾಜಭವನಕ್ಕೆ ರಾಜ್ಯಪಾಲರು ಆಹ್ವಾನ – ಶ್ಲಾಘನೆ

ನಟ ಸೋನು ಸೂದ್ ಈಗ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲಗುತ್ತಿದ್ದ ಸುಮಾರು 28 ಸಾವಿರ ನಿರಾಶ್ರಿತರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಮುಂಬೈ ಕರಾವಳಿ ಪ್ರದೇಶದಲ್ಲಿರುವ ಸುಮಾರು 28 ಸಾವಿರ ಜನರಿಗೆ ಆಹಾರ ಒದಗಿಸಿದ್ದಾರೆ. ಅಲ್ಲದೇ ಅವರಿಗೆ ಆಶ್ರಯದ ವ್ಯವಸ್ಥೆ ಕೂಡ ಮಾಡಿದ್ದಾರೆ. ಜೊತೆಗೆ ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಬಡಿದಪ್ಪಳಿಸುವ ಮುನ್ನವೇ ಎಲ್ಲ ನಿರಾಶ್ರಿತರನ್ನು ಸ್ಥಳಾಂತರ ಮಾಡಲು ಮೂಲಕ ಅವರನ್ನು ರಕ್ಷಿಸಿದ್ದಾರೆ.

ಇಂದು ನಾವೆಲ್ಲರು ಕಠಿಣ ಸಮಯವನ್ನು ಎದುರಿಸುತ್ತಿದ್ದೀವಿ. ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ನೆರವು ನೀಡಬೇಕು. ಈ ಹಿನ್ನೆಲೆಯಲ್ಲಿ ನನ್ನ ತಂಡ ಮತ್ತು ನಾನು, ಮುಂಬೈ ಕರಾವಳಿ ಪ್ರದೇಶದಲ್ಲಿರುವ 28 ಸಾವಿರಕ್ಕೂ ಹೆಚ್ಚಿನ ಜನರಿಗೆ ಆಹಾರವನ್ನು ವಿತರಿಸಿದ್ದೇವೆ. ಅಲ್ಲದೇ ಅವರಿಗೆ ಶಾಲಾ, ಕಾಲೇಜಿನಲ್ಲಿ ಪುನರ್ವಸತಿ ಮಾಡಿಕೊಡಲಾಗಿದೆ. ಇದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದರಲ್ಲಿ 200 ಮಂದಿ ಅಸ್ಸಾಂನ ವಲಸಿಗರು ನಿಸರ್ಗ ಸೈಕ್ಲೋನ್‍ನಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸೋನು ಸೂದ್ ಹೇಳಿದರು.

ಈಗಾಗಲೇ ಕೊರೊನಾ ಹಾವಳಿಯಿಂದ ತತ್ತರಿಸಿರುವ ಮುಂಬೈ ನಗರಕ್ಕೆ ನಿಸರ್ಗ ಅರಬ್ಬಿ ಸಮುದ್ರದಲ್ಲಿ ಎಬ್ಬಿರುವ ನಿಸರ್ಗ ಸೈಕ್ಲೋನ್ ಮಹಾರಾಷ್ಟ್ರದಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ಆದರೆ ನಿಸರ್ಗ ಚಂಡಮಾರುತ ತನ್ನ ದಿಕ್ಕನ್ನು ಬದಲಾಯಿಸಿದ ಪರಿಣಾಮ ಭಾರೀ ಪ್ರಮಾಣದ ಅನಾಹುತ ತಪ್ಪಿದೆ ಎಂದು ಹವಾಮಾನ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ಮೊದಲು ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಸುಮಾರು ಒಡಿಶಾದ 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಯುವತಿಯರಿಗೆ ಸಹಾಯ ಮಾಡಲು ಮುಂದಾಗಿದ್ದು, ಕೇರಳದ ಕೊಚ್ಚಿ ಮತ್ತು ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಆಯಾ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದರು. ಅಲ್ಲಿಂದ ಅನೇಕ ಬಗೆಯ ಅನುಮತಿಗಳನ್ನು ಪಡೆದುಕೊಂಡಿದ್ದರು. ನಂತರ ಬೆಂಗಳೂರಿನಿಂದ ಕೊಚ್ಚಿಗೆ ವಿಶೇಷ ವಿಮಾನ ರವಾನಿಸಲು ವ್ಯವಸ್ಥೆ ಮಾಡಿದ್ದರು. ಈ ವಿಮಾನದ ಮೂಲಕ 177 ಯುವತಿಯರನ್ನು ಒಡಿಶಾಕ್ಕೆ ಕಳುಹಿಸಿದ್ದಾರೆ. ಈ ಮೂಲಕ ಯುವತಿಯರು ಅವರ ಕುಟುಂಬವನ್ನು ಸೇರಲು ಸೋನು ಸೂದ್ ನೆರವಾಗಿದ್ದರು.