Saturday, 15th December 2018

Recent News

ದರ್ಶನ್ ಬಾಸ್ ಅಂದ್ರೂ ಖುಷಿನೇ, ಯಶ್ ಬಾಸ್ ಅಂದ್ರೂ ಸಂತೋಷನೇ – ಅವರವರ ಮನೆಗೆ ಅವರೇ ಬಾಸ್ ಎಂದ ಸೆಂಚುರಿ ಸ್ಟಾರ್ ಶಿವಣ್ಣ

ಬೆಂಗಳೂರು: ದರ್ಶನ್ ಬಾಸ್ ಅಂದ್ರುನೂ ಖುಷಿನೇ, ಯಶ್ ಬಾಸ್ ಅಂದ್ರುನೂ ಖುಷಿನೇ ಅವರವರಿಗೆ ಅವರವರ ಮನೆಗೆ ಅವರೇ ಬಾಸ್ ಅಂತ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹೇಳಿದ್ದಾರೆ.

ಕಿಚ್ಚ ಸುದೀಪ್ ಮತ್ತು ಶಿವಣ್ಣ ಅಭಿನಯದ ವಿಲನ್ ಚಿತ್ರದ ನಂಬರ್ ಸಾಂಗ್ ಕಾಂಟ್ರವರ್ಸಿಗೆ ಪ್ರತಿಕ್ರಿಯಿಸಿದ ಶಿವಣ್ಣ, ಈ ಜೀವನದಲ್ಲಿ ಅವರವರ ಮನೆಗಳಿಗೆ ಅವರೆ ಬಾಸ್. ಬಾಸ್ ಯಾರ ಸ್ವತ್ತು ಅಲ್ಲ, ಅದಕ್ಕಿಂತ ಎಲ್ಲರೂ ಅರ್ಥಮಾಡಿಕೊಳ್ಳಬೇಕಾದುದ್ದು, ಎಲ್ಲರಿಂತ ದೊಡ್ಡ ಬಾಸ್ ಮೇಲಿದ್ದಾನೆ. ಎಲ್ಲರೂ ಲೀಡರ್ ಆಗಲಿ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವವನೆ ನಿಜವಾದ ಲೀಡರ್. ಎಲ್ಲರೂ ಹಿಂದೆ ಬರಬೇಕು ಎನ್ನುವ ದೃಷ್ಠಿ ನನಗೆ ಯಾವತ್ತು ಇಲ್ಲ ಎಂದರು. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?

ಯಾರ್ ಬಾಸ್ ಆದ್ರೆ ಏನು, ದರ್ಶನ್ ಬಾಸ್ ಅಂದ್ರೂ ಸಂತೋಷ, ಯಶ್ ಬಾಸ್ ಅಂದ್ರೂ ಸಂತೋಷ, ಎಲ್ಲರು ಬಾಸ್ ಆಗಲಿ. ಕನ್ನಡ ಚಿತ್ರರಂಗ ಬೆಳೆಯಬೇಕು ಅನ್ನೋದಷ್ಟೇ ನಮ್ಮ ಆಸೆ ಎಂದು ದ್ರೋಣ ಸಿನಿಮಾ ಮುಹೂರ್ತದಲ್ಲಿ ಶಿವಣ್ಣ ಹೇಳಿದ್ದಾರೆ. ಇದನ್ನೂ ಓದಿ: ತನ್ನ ಬೆಂಜ್ ಕಾರಿಗೆ ಸ್ಪೆಶಲ್ ‘ಬಾಸ್’ ನಂಬರ್ ಪಡೆದ್ರು ಯಶ್!

ದಿ ವಿಲನ್ ಸಿನಿಮಾದ `ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ ಒನ್ ಅಂತಾರೋ’ ಎಂದು ಸಾಗುವ ಹಾಡಿಗೆ ಶಿವರಾಜ್‍ಕುಮಾರ್ ಸಖತ್ ಸ್ಟೆಪ್ ಹಾಕಿದ್ದಾರೆ. ಆದರೆ ಇತ್ತೀಚೆಗೆ ಈ ಹಾಡನ್ನು ಕ್ಯಾಪ್ಚರ್ ಮಾಡಿಕೊಂಡಿರುವ ಪ್ರೇಮ್, ಈ ಹಾಡಿನ ಸಾಲನ್ನ ಬರೆದು ಒಂದೆರಡು ಫೋಟೋ ಹಾಕಿ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದರು. ಆದರೆ ಅಭಿಮಾನಿಗಳು ನಿರ್ದೇಶಕ ಪ್ರೇಮ್ ಕಾಂಟ್ರವರ್ಸಿ ಮಾಡೋಕೆ ರೆಡಿನಾ ಅನ್ನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ವಿಶೇಷವಾಗಿ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

Leave a Reply

Your email address will not be published. Required fields are marked *