Monday, 16th December 2019

ಹೈದರಾಬಾದಿನಲ್ಲಿ ನಿಶ್ಚಿತಾರ್ಥ ಮಾಡ್ಕೊಂಡು ಚೆನ್ನೈನಲ್ಲಿ ಮದ್ವೆಯಾಗ್ತಿರುವ ರಿಷಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಿಷಿ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ರಿಷಿ ಏಪ್ರಿಲ್‍ನಲ್ಲಿ ತಮ್ಮ ಬಹುಕಾಲದ ಗೆಳತಿ ಸ್ವಾತಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸ್ವಾತಿ ವೃತ್ತಿಯಲ್ಲಿ ಬರಹಗಾರ್ತಿಯಾಗಿದ್ದು, ನವೆಂಬರ್ 10ರಂದು ರಿಷಿ ಅವರನ್ನು ಮದುವೆ ಆಗಲಿದ್ದಾರೆ ಹೇಳಲಾಗುತ್ತಿದೆ.

ಏಪ್ರಿಲ್‍ನಲ್ಲಿ ನಿಶ್ಚಿತಾರ್ತ ಮಾಡಿಕೊಂಡ ರಿಷಿ ಮದುವೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈಗ ರಿಷಿ ಮತ್ತು ಸ್ವಾತಿ ಮದುವೆ ದಿನಾಂಕ ರಿವೀಲ್ ಆಗಿದೆ. ನವೆಂಬರ್ 10ರಂದು ಇಬ್ಬರ ವಿವಾಹ ಚೆನ್ನೈನಲ್ಲಿ ನಡೆಯಲಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ರಿಷಿ ಅವರ ಮದುವೆಯಲ್ಲಿ ಕುಟುಂಬದವರಿಗೆ ಮತ್ತು ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ. ರಿಷಿ ಮತ್ತು ಸ್ವಾತಿ ಮದುವೆ ಚೆನ್ನೈನಲ್ಲಿ ಮಾಡಿಕೊಂಡರೆ, ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ರಿಷಿ ಮನೆಯಲ್ಲಿ ಮದುವೆ ತಯಾರಿ ಶುರುವಾಗಿದೆ.

ನವೆಂಬರ್ 10ಕ್ಕೆ ಇಬ್ಬರು ಮದುವೆಯಾಗುತ್ತಿದ್ದು, ಮದುವೆ ಆದ 10 ದಿನಗಳ ನಂತರ ಚಿತ್ರರಂಗದ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಆಯೋಜಿಸುತ್ತಾರೆ ಎನ್ನಲಾಗಿದೆ. ಸದ್ಯಕ್ಕೆ ರಿಷಿ `ಸಕಲಕಲಾವಲ್ಲಭ’, `ರಾಮನ ಅವತಾರ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಮತ್ತು `ಸಿಲ್ಕ್ ಸಿದ್ದ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *