Sunday, 24th March 2019

ಪುಟ್ಟಗೌರಿ ಖ್ಯಾತಿಯ ನಟಿ ರಂಜನಿಯಿಂದ ಎಡವಟ್ಟು

ಬೀದರ್: ಬಸವಣ್ಣನ ಕರ್ಮಭೂಮಿಯಲ್ಲಿ ನಡೆದ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಪಾದರಕ್ಷೆ ಹಾಕಿಕೊಂಡು ವೇದಿಕೆ ಏರಿ ಪುಟ್ಟಗೌರಿ ಧಾರವಾಹಿ ಖ್ಯಾತಿಯ ನಾಯಕಿ ರಂಜನಿ ರಾಘವನ್ ಎಡವಟ್ಟು ಮಾಡಿಕೊಂಡಿದ್ದಾರೆ.

ಇಂದು ಬಸವಣ್ಣನ ಕರ್ಮ ಭೂಮಿ ಬಸವಕಲ್ಯಾಣದಲ್ಲಿ 17ನೇ ಕಲ್ಯಾಣ ಪರ್ವ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರದಲ್ಲಿ ಕಲ್ಯಾಣ ಪರ್ವ ಪವಿತ್ರ ವೇದಿಕೆಯಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸೇರಿದಂತೆ ಶರಣರು ಇದ್ದರು. ಆದರೆ ಈ ವೇದಿಕೆಯ ಮೇಲೆ ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ಚಪ್ಪಲಿ ಹಾಕಿಕೊಂಡು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

ರಂಜನಿ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಮತ್ತು ಶರಣರು ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಬರುತ್ತಿದ್ದರು. ವೇದಿಕೆಯ ಮೆಟ್ಟಿಲು ವರೆಗೂ ಪೊಲೀಸರು ಬಂದಿದ್ದಾರೆ. ಆದರೆ ಅಲ್ಲಿಂದ ಪೊಲೀಸರು ಬಂದಿಲ್ಲ. ಬಳಿಕ ರಂಜನಿ ಅವರು ಪಾದರಕ್ಷೆಯ ಸಮೇತ ವೇದಿಕೆಯ ಮೇಲೆ ಹೋಗಿದ್ದಾರೆ.

ಅಷ್ಟೇ ಅಲ್ಲದೇ ರಂಜನಿ ಅವರ ಕೈಯಿಂದ ವೇದಿಕೆಯ ಮೇಲಿದ್ದವರಿಗೆ ಹಾರ ಹಾಕಿಸಲು ಶರಣರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರು ಹಾರ ಹಾಕಲು ಮುಂದಾಗುತ್ತಿದ್ದರು. ಆಗ ಅವರ ಪಕ್ಕದಲ್ಲಿದ್ದರು ಬಂದು ಪಾದರಕ್ಷೆ ಬಿಡುವಂತೆ ಸೂಚಿಸಿದ್ದಾರೆ. ಬಳಿಕ ರಂಜನಿಯವರು ಪಾದರಕ್ಷೆಯನ್ನು ಬಿಟ್ಟು ವೇದಿಕೆಯ ಮೇಲೆ ಆಸೀನರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *