ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

Advertisements

ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಕೇವಲ ಬಾಯಿ ಮಾತಿನಲ್ಲೇ ಲವ್ವಿಡವ್ವಿ ವಿಷಯಗಳು ಬಂದು ಹೋಗುತ್ತಿದ್ದವು. ರಾಕೇಶ್ ಅಡಿಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಜಯಶ್ರೀ ಆರಾಧ್ಯ ಕೆನ್ನೆಗೆ ಮುತ್ತುಕೊಟ್ಟು ಸುದ್ದಿಯಾಗಿದ್ದಾರೆ. ಈ ಸಿಹಿ ಮುತ್ತು ಕೊಟ್ಟಿದ್ದು ಬೇರೆ ಕಾರಣಕ್ಕೆಯಾದರೂ, ಈ ನಡೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisements

ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಇಬ್ಬರೂ ತುಂಬಾ ಹತ್ತಿರವಾಗುತ್ತಿದ್ದಾರೆ. ರಾಕೇಶ್ ಸದಾ ತನ್ನ ಜೊತೆಯೇ ಇರಬೇಕು ಎನ್ನುವುದು ಸೋನು ಆಸೆ. ರಾಕೇಶ್ ಅಡಿಗ ಬೇರೆಯವರ ಜೊತೆ ಕ್ಲೋಸ್ ಆಗುವುದನ್ನು ಸೋನು ಸಹಿಸಿಕೊಳ್ಳುತ್ತಿಲ್ಲ. ಅದನ್ನು ಪರೀಕ್ಷಿಸಲೆಂದೇ ರಾಕೇಶ್ ಮತ್ತು ಜಯಶ್ರೀ ಪ್ಲ್ಯಾನ್ ಮಾಡಿ ಸೋನು ಎದುರೇ ಜಯಶ್ರೀಗೆ ರಾಕೇಶ್ ಕಿಸ್ ಮಾಡುತ್ತಾನೆ. ಅದನ್ನು ಗಮನಿಸುವ ಸೋನು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

Advertisements

ರಾಕೇಶ್ ಮತ್ತು ಸೋನು ಗೌಡ ಇಬ್ಬರ ಮಧ್ಯೆ ಲವ್ವಿಡವ್ವಿ ಶುರುವಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸದಾ ಅಂಟಿಕೊಂಡೇ ಇರುತ್ತಾರೆ. ಮೊನ್ನೆ ಇಬ್ಬರೂ ಸ್ಮೋಕಿಂಗ್ ಕೋಣೆಯಲ್ಲೂ ಒಟ್ಟಾಗಿಯೇ ಕಾಣಿಸಿಕೊಂಡಿದ್ದರು. ಅಲ್ಲದೇ, ಇಡೀ ಮನೆ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡುತ್ತಿದೆ. ಒಬ್ಬರಿಗೊಬ್ಬರೂ ಬಿಟ್ಟಿರಲಾರದಷ್ಟು  ಹಚ್ಚಿಕೊಂಡಿದ್ದಾರೆ. ಇದನ್ನು ಪರೀಕ್ಷಿಸಲು ರಾಕೇಶ್ ಮುತ್ತಿನಾಟದ ಮಾರ್ಗವನ್ನು ಕಂಡುಕೊಂಡಿದ್ದರು.

Live Tv

Advertisements