Thursday, 5th December 2019

Recent News

ವೈವಾಹಿಕ ಜೀವನಕ್ಕೆ ಕಾಲಿಡಲು ರಮ್ಯಾ ನಿರ್ಧಾರ!

ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಕುರಿತು ಅಚ್ಚರಿಯ ಸುದ್ದಿಯೊಂದು ಬೆಳಕಿಗೆ ಬಂದಿದ್ದು, ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸುಮಾರು 10 ವರ್ಷಗಳ ಕಾಲ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿದ್ದ ನಟಿ ರಮ್ಯಾ ಸಂಸದೆಯಾದ ಬಳಿಕ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿ ಗುರುತಿಸಿಕೊಂಡಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಏಳೆಂಟು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್ ಅವರು ರಮ್ಯಾ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷವೇ ಈ ಕುರಿತು ರಮ್ಯಾ ಸುಳಿವು ನೀಡಿದ್ದರು. ಅವರ ತಾಯಿ ರಂಜಿತಾ, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್ ಅವರನ್ನು ಕೈ ಹಿಡಿಯಲು ರಮ್ಯಾ ತಯಾರಾಗಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ‘ಅಭಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಮ್ಯಾ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸ್ಯಾಂಡಲ್‍ವುಟ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಸಾಲುಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಕನ್ನಡದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಆದರೆ, 2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾ ನಂತರ ರಮ್ಯಾ ಯಾವ ಚಿತ್ರದಲ್ಲೂ ನಟಿಸಿಲ್ಲ.

2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದೆಯೂ ಆಗಿದ್ದರು. ಆಯ್ಕೆಯಾದ ನಂತರ ರಮ್ಯಾ ಅವರ ಕೆಲಸಕ್ಕಿಂತ ಹೆಚ್ಚಾಗಿ ಅವರ ಸುತ್ತ ವಿವಾದಗಳೇ ಸುತ್ತಿಕೊಂಡವು. ಹೀಗಾಗಿ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಆಗಲೂ ಸಹ ಪ್ರಾರಂಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದ ರಮ್ಯಾ ಬರು ಬರುತ್ತ ತೆಮರೆಗೆ ಸರಿದರು. ಇತ್ತೀಚೆಗೆ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕುತ್ತಿದ್ದ ಪೋಸ್ಟ್ ಗಳಿಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿತ್ತು. ಅಲ್ಲದೆ, ಹೆಚ್ಚು ಜನ ಟ್ರೋಲ್ ಮಾಡುತ್ತಿದ್ದರು. ಹೀಗಾಗಿ ಇತ್ತೀಚೆಗೆ ರಮ್ಯಾ ಅವರು ಸಾಮಾಜಿಕ ಜಾಲತಾಣದ ಖಾತೆಯನ್ನು ಡಿಸೆಬಲ್ ಮಾಡಿದ್ದರು.

Leave a Reply

Your email address will not be published. Required fields are marked *