Connect with us

Bengaluru City

ನನಗೆ ಡ್ರಗ್ಸ್ ಅನ್ನೋದರ ಸ್ಪೆಲ್ಲಿಂಗ್ ಗೊತ್ತಿಲ್ಲ: ನವೀನ್ ಕೃಷ್ಣ

Published

on

– ಇದು ರಾಜ್‍ಕುಮಾರ್ ಇದ್ದ ಇಂಡಸ್ಟ್ರಿ
– ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ

ಬೆಂಗಳೂರು: ಇದು ರಾಜ್ ಕುಮಾರ್ ಇದ್ದ ಇಂಡಸ್ಟ್ರಿ. ಅಣ್ಣಾವ್ರು ಯಾವಾಗಲೂ ಕ್ಯಾಮೆರಾನೇ ದೇವರಂತೆ ಕಾಣುತ್ತಿದ್ದರು. ಕ್ಯಾಮೆರಾಗೆ, ಮೇಕಪ್ ಮ್ಯಾನ್‍ಗೆ, ನಿರ್ದೇಶಕರಿಗೆ ಕೈ ಮುಗಿದು ಬರುವ ಇಂಡಸ್ಟ್ರಿ ಇದು. ನಾನು ಕಂಡಂತೆ ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ ಎಂದು ನಟ ನವೀನ್ ಕೃಷ್ಣ ಹೇಳಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ, ನನ್ನ ಪ್ರಕಾರ ನನಗೆ ಡ್ರಗ್ಸ್ ಅನ್ನೋದರ ಸ್ಪೆಲ್ಲಿಂಗ್ ಗೊತ್ತಿಲ್ಲ. ಚಿತ್ರರಂಗದಲ್ಲಿ ಕೆಲವೇ ಕೆಲವು ನಟರು ಮಾತ್ರವಿಲ್ಲ. ಇಲ್ಲಿ ಸಾವಿರಾರು ಕಲಾವಿದರು, ಸಾವಿರಾರು ತಂತ್ರಜ್ಞರು ಕೆಲಸ ಮಾಡುತ್ತಿದ್ದೀವಿ. ಆದ್ದರಿಂದ ಯಾರೋ ಒಬ್ಬರು ಇರಬಹುದೆನೋ? ಅನ್ನೋ ಕಾರಣಕ್ಕೆ ಇಡೀ ಇಂಡಸ್ಟ್ರಿಯನ್ನ ಎಳೆದು ತರುವುದು ತಪು ಎಂದರು.

ಶೂಟಿಂಗ್‍ಗೆ ಡ್ರಗ್ಸ್ ಸೇವಿಸಿ ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಇದು ರಾಜ್ ಕುಮಾರ್ ಇದ್ದ ಇಂಡಸ್ಟ್ರಿ. ಅಣ್ಣಾವ್ರು ಯಾವಾಗಲೂ ಕ್ಯಾಮೆರಾನೇ ದೇವರಂತೆ ಕಾಣುತ್ತಿದ್ದರು. ಕ್ಯಾಮೆರಾಗೆ, ಮೇಕಪ್ ಮ್ಯಾನ್‍ಗೆ, ನಿರ್ದೇಶಕರಿಗೆ ಕೈ ಮುಗಿದು ಬರುವ ಇಂಡಸ್ಟ್ರಿ ಇದು. ನಾನು ಕಂಡಂತೆ ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ. ಹೀಗಾಗಿ ಯಾರು ನಿಜವಾಗಿಯೂ ಪಾಲ್ಗೊಂಡಿದ್ದಾರೆ ಅವರ ಹೆಸರನ್ನಷ್ಟೇ ಹೇಳಿ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಡೀ ಇಂಡಸ್ಟ್ರಿಯನ್ನ ದೂಷಿಸುವುದು ತಪ್ಪು ಎಂದಿದ್ದಾರೆ.

ಅಕ್ರಮ ಚಟುವಟಿಕೆಗಳು ಎಲ್ಲಿ ಇಲ್ಲ, ಎಲ್ಲಾ ಉದ್ಯಮಗಳಲ್ಲೂ ಇದೆ. ದುಡ್ಡಿಗಾಗಿ ಏನೇನೋ ನಡೆಯುತ್ತಿದೆ. ಇಂದ್ರಜಿತ್ ಆರೋಪ ಮಾಡಿರುವ ವೇಗದಲ್ಲೇ ನೇರವಾಗಿ ಗೊತ್ತಿರುವ ಹೆಸರುಗಳನ್ನ ಹೇಳಬಹುದಿತ್ತು. ಪ್ರಭಾವಿಗಳು ಏನಾದರೂ ತಪ್ಪು ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿ ಎಂದು ನವೀನ್ ಕೃಷ್ಣ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದರು ನವೀನ್ ಕೃಷ್ಣ “ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕಲಾವಿದರು ಮಾತ್ರ ಇಲ್ಲ. ಕಲಾವಿದರು, ತಂತ್ರಜ್ಞರು ಸೇರಿ ಲಕ್ಷಾಂತರ ಮಂದಿ ಕೂಡ ಕನ್ನಡ ಚಿತ್ರರಂಗದಲ್ಲಿದ್ದಾರೆ. ಮಜಾ ಮಾಡಲು ಹಣವಿರುವ ಶ್ರೀಮಂತರು ಒಂದೆಡೆಯಿದ್ದರೆ, ದುಡಿದು ಬದಕಲೂ ಪರದಾಡುವ ಬಡವರೂ ಇದ್ದಾರೆ. ಆದರೆ ಎಲ್ಲರೂ ಸ್ಯಾಂಡಲ್‍ವುಡ್‍ನ ಭಾಗವೇ ಆಗಿದ್ದಾರೆ. ನನ್ನ ಉದ್ದೇಶ ಒಂದೇ, ಯಾರು ಈ ಮಾಫಿಯಾದಲ್ಲಿ ಸೇರಿಕೊಂಡಿದ್ದಾರೋ ಅವರ ಹೆಸರುಗಳನ್ನ ಹೇಳಿ. ಅವರನ್ನು ಮಾತ್ರ ಆರೋಪಿತರನ್ನಾಗಿಸಿ” ಎಂದು ನವೀನ್ ಕೃಷ್ಣ  ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಯೊಬ್ಬರು ಇಂದ್ರಜಿತ್ ಹೇಳಿಕೆಗೆ ನೀವು ಏನು ಪ್ರತಿಕ್ರಿಯೆ ಕೊಡುತ್ತೀರಿ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಇದಕ್ಕೆ ನಟ ನವೀನ್ ಕೃಷ್ಣ, “ಯಾರು ಅಂತ ಗೊತ್ತು, ಆದರೆ ಆಮೇಲೆ ಹೇಳುತ್ತೀನಿ ಅಂದರೆ ಹೇಗೆ. ಹೋಳೊಂಗೆ ಇದ್ದರೆ ಫಸ್ಟ್ ಹೇಳಬೇಕು. ಅದು ಬಿಟ್ಟು ಟ್ರೈಲರ್ ನೋಡಿ ಆಮೇಲೆ ಸಿನಿಮಾ ನೋಡಿ ಅಂದರೆ ಹೇಗೆ” ಎಂದು ಪ್ರತಿಕ್ರಿಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *