Connect with us

Bengaluru City

ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ- ಅಕ್ಷರ ಮಾಂತ್ರಿಕ ನಿಧನಕ್ಕೆ ಸುದೀಪ್ ಸಂತಾಪ

Published

on

ಬೆಂಗಳೂರು: ಹಿರಿಯ ಪತ್ರಕರ್ತ, ಖ್ಯಾತ ಲೇಖಕ ರವಿ ಬೆಳಗೆರೆ ಅವರ ನಿಧನಕ್ಕೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ರವಿ ಬೆಳಗೆರೆ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿರುವ ನಟ ಸುದೀಪ್, ಬಿಸ್‍ಬಾಸ್ ಕಾರ್ಯಕ್ರಮದ ಸಂದರ್ಭದ ಎರಡು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿದ್ದ ಈ ಫೋಟೋದಲ್ಲಿ ನಾನು ಅವರನ್ನು ಕೊನೆಯದಾಗಿ ನೋಡಿದ್ದೆ. ಉಳಿದ ಸ್ಪರ್ಧಿಗಳು ಖಂಡಿತ ಈ ಕ್ಷಣವನ್ನು ತಮ್ಮ ಜೀವನದಲ್ಲಿ ನೆನಪಿಟ್ಟುಕೊಳ್ಳುತ್ತಾರೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನನ್ನ ಸಂತಾಪ, ಅವರ ಆತ್ಮ ಶಾಂತಿಯಿಂದ ವಿಶ್ರಾಂತಿ ಪಡೆಯಬೇಕೆಂದು ಪ್ರಾರ್ಥನೆ ಮಾಡುವುದಾಗಿ ಸುದೀಪ್ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಅಕ್ಷರ ರಾಕ್ಷಸ’ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಿಎಂ ಸಂತಾಪ

ಇದಕ್ಕೂ ಮುನ್ನ ರವಿ ಬೆಳಗೆರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಟಿ ದೀಪಿಕಾ ದಾಸ್, ಹೊರ ಜಗತ್ತಿನಲ್ಲಿ ರವಿ ಬೆಳಗೆರೆ ಅವರ ಬಗ್ಗೆ ಒಂದು ಅಭಿಪ್ರಾಯವಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಆ ರೀತಿ ಇರಲಿಲ್ಲ. ಎಲ್ಲರನ್ನೂ ನಗಿಸ್ತಾ ಇದ್ದರು. ಅವರೊಂದಿಗೆ ಇದ್ದಾಗ ಸಮಯ ಹೋಗಿದ್ದೇ ಗೊತ್ತಾಗ್ತಾ ಇರಲಿಲ್ಲ. ಅವರೊಂದಿಗೆ ಕಳೆದ ಸಮಯ ಜೀವನ ಪರ್ಯಂತ ನೆನಪಿರುತ್ತದೆ ಎಂದು ಹೇಳಿ ಭಾವುಕರಾಗಿದ್ದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಅವರು ಇಂದು ಬೆಳಗ್ಗೆ ಬೆಂಗಳೂರಿನ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ತನ್ನ ಬರಹದಿಂದಲೇ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ರವಿ ಅವರ ಮೃತದೇಹವನ್ನು ಬೆಳಗ್ಗೆ 9 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರೋ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

ಉಳಿದಂತೆ ಬಿಗ್‍ಬಾಸ್ ಸೀಸನ್ 7ರ ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಅವರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ತಮ್ಮ ತಾಯಿಯನ್ನು ನೆನಪು ಮಾಡಿಕೊಂಡಿದ್ದ ರವಿ ಬೆಳಗೆರೆ ಅವರು, ನಾನು ಅಮ್ಮನ ಮಗ. ನನಗೆ ಯಾರು ತಂದೆ ಎಂದು ಗೊತ್ತಿಲ್ಲ. ಆದ್ದರಿಂದ ನನಗೆ ಎಲ್ಲವೂ ಅಮ್ಮನೇ. ಅವರನ್ನು ಜೀವನದಲ್ಲಿ ಹೇಗೆ ರಕ್ಷಣೆ ಮಾಡಿದೆ. ಈಗ ಜೀವನದಲ್ಲಿ ಎಲ್ಲ ಇದ್ದರೂ ಅಮ್ಮ ಇಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದರು. ಇದಾದ ಬಳಿಕ ಬಿಗ್‍ಬಾಸ್ ಮನೆಯಿಂದ ಹೊರಬರುವ ವೇಳೆ ವೇದಿಕೆಯಲ್ಲಿ ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. ಕನ್ನಡದ ಅಮಿತಾಬ್ ಬಚ್ಚನ್ ಎಂದು ಕರೆದಿದ್ದರು. ಇದನ್ನೂ ಓದಿ: ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

Click to comment

Leave a Reply

Your email address will not be published. Required fields are marked *