
ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ ನವರಸ ನಾಯಕ ಜಗ್ಗೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೊಸ ಕಾರೊಂದನ್ನು ಖರೀದಿಸಿರುವ ಫೋಟೋವನ್ನು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
Advertisements
ನಾಯಕನಾಗಿ, ಹಾಸ್ಯ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಜಗ್ಗೇಶ್ ಹೊಸ ಬಿಎಂಡಬ್ಲ್ಯೂ ಎಕ್ಸ್ 5 ಕಾರನ್ನು ಖರೀದಿಸಿದ್ದಾರೆ. ಈಗ ಶುಭ ಶುಕ್ರವಾರದಂದು ಮತ್ತೊಂದು ಕಾರು ಖರೀದಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ
Advertisements
ಶುಭ ಶುಕ್ರವಾರ ರಾಯರ ಮಠದಲ್ಲಿ ನನಗೆ ನೀಡಿದ ಪ್ರಸಾದ ಅವರಿಗೆ ನೈವೇದ್ಯದಂತೆ ಅರ್ಪಿಸಿ ಮನೆಗೆ ತಂದೆ. ರಾಯರ ಕೃಪೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈಟ್ ಕಲರ್ ಕಾರಿನ ಫೋಟೋವನ್ನು ಜಗ್ಗೇಶ್ ಶೇರ್ ಮಾಡಿದ್ದಾರೆ. ನೆಚ್ಚಿನ ನಟ ಜಗ್ಗೇಶ್ಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇನ್ನು ಜಗ್ಗೇಶ್ ನಟನೆಯ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
Advertisements
Advertisements