Connect with us

Bengaluru City

ರಾಮನಾಮ ಜಪಿಸಿ ಮತ ಕೇಳಿದ ಜಗ್ಗೇಶ್

Published

on

-ರಾಮಮಂದಿರ ಸ್ಥಾಪನೆ ಹಿಂದೆ ಬಿಜೆಪಿ ಶ್ರಮ

ಬೆಂಗಳೂರು: ನಟ, ಬಿಜೆಪಿ ಮುಖಂಡ ಜಗ್ಗೇಶ್, ರಾಮನಾಮ ಜಪಿಸಿ ಯಶವಂತಪುರದಲ್ಲಿ ಮತಯಾಚನೆ ಮಾಡಿದ್ದಾರೆ. ಜಗ್ಗೇಶ್ ಇಂದು ಯಶವಂತಪುರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಮತಯಾಚನೆ ಮಾಡಿದರು.

ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಜಗ್ಗೇಶ್, 17 ಶಾಸಕರ ತ್ಯಾಗದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಹಾಗಾಗಿ ಮತದಾರರು ಶಾಸಕರನ್ನು ಗೆಲ್ಲಿಸಬೇಕಿದೆ. ಬಿಜೆಪಿಯ ಶ್ರಮದಿಂದಾಗಿ ರಾಮಮಂದಿರ ಸ್ಥಾಪನೆ ಆಗುತ್ತಿದೆ. ರಾಮಮಂದಿರ ವಿಷಯ ನೆನಪಿನಲ್ಲಿಟ್ಟುಕೊಂಡು ಮತ ಹಾಕಬೇಕೆಂದು ಮನವಿ ಮಾಡಿಕೊಂಡರು.

2018ರ ಚುನಾವಣೆಯಲ್ಲಿ ಜನರು 104 ಸ್ಥಾನ ನೀಡಿದರು. 17 ಜನರ ಭುಜಬಲದಿಂದಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನಾಚಾರವನ್ನು ಜನರ ಮುಂದಿಟ್ಟು ಶಾಸಕರು ಹೊರ ಬಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಎಲ್ಲ ಉಪಚುನಾವಣೆಯ ಕ್ಷೇತ್ರಗಳ ಮತದಾರರು ನಿಮ್ಮ ಮನಸಾಕ್ಷಿಯನ್ನು ಪ್ರಶ್ನೆ ಮಾಡಿಕೊಂಡರೆ ಬಿಜೆಪಿ ಯಾಕೆ ಬೇಕು ಎಂಬುದಕ್ಕೆ ಉತ್ತರ ಸಿಗುತ್ತದೆ ಎಂದರು.