Tuesday, 23rd July 2019

Recent News

2 ಸಾವಿರ ರೂ.ನಲ್ಲಿ ನಡೆದಿತ್ತು ಮದ್ವೆ – 35 ವರ್ಷದ ಹಿಂದಿನ ಲವ್ ಸ್ಟೋರಿ ಬಿಚ್ಚಿಟ್ಟ ಜಗ್ಗೇಶ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ಪತ್ನಿ ಪರಿಮಳ ಅವರು ಇಂದು ತಮ್ಮ 35 ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇಂದು ಅವರು ತಮ್ಮ ಪ್ರೀತಿ, ಮದುವೆಯ ಫ್ಲ್ಯಾಶ್ ಬ್ಯಾಕ್ ಕಥೆಯನ್ನು ಹಂಚಿಕೊಂಡಿದ್ದಾರೆ.

ನಟ ಜಗ್ಗೇಶ್ ಅವರು ತಮ್ಮ ಪ್ರೀತಿಯ ಬಗ್ಗೆ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. “1984 ಮಾರ್ಚ್ 22 ರಂದು ನಾನು ಮತ್ತು ಪರಿಮಳ 2 ಸಾವಿರ ರೂ ಖರ್ಚಿನಲ್ಲಿ ಮದುವೆಯಾಗಿದ್ದೆವು. ಇಂದಿಗೆ ನಮ್ಮ ಸಾಂಸಾರಿಕ ಜೀವನ ಶುರುವಾಗಿ 35 ವರ್ಷವಾಗಿದೆ. ಅಂದು ತುಂಗ ತೀರದಲ್ಲಿ ಕಲ್ಲಿನ ಮೇಲೆ ಕೆತ್ತಿದ ಜಾಗದಲ್ಲಿ ನಾವಿಬ್ಬರು ಕುಳಿತುಕೊಂಡು ನಡೆದು ಬಂದ ಕಷ್ಟ-ಸುಖದ, ಸ್ವಾಭಿಮಾನದ ದಾರಿನೆನೆದು ಕಣ್ಣು ಒದ್ದೆಯಾಯಿತು. ಅರ್ಜುನನ ರಥಕ್ಕೆ ಶ್ರೀಕೃಷ್ಣ ಸಾರಥಿಯಾದರೆ, ನಮ್ಮ ಬದುಕಿನ ಬಂಡಿಗೆ ರಾಯರು ಸಾರಥಿಯಾದರು. ಹಳೆ ನೆನಪು ಯಾವಾಗಲೂ ಅಮರವಾಗಿರುತ್ತದೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

ಪರಿಮಳ ನಾನು ಪರಸ್ಪರ 1983 ರಲ್ಲಿ ಭೇಟಿಯಾಗಿದ್ದೆವು. ಮಲ್ಲೇಶ್ವರ 8ನೇ ಕ್ರಾಸ್ ರಾಯರ ಮಠದದಲ್ಲಿ ಜೀವನದಲ್ಲಿ ಒಟ್ಟಿಗೆ ಹೆಜ್ಜೆ ಹಾಕುವ ಎಂದು ನಿರ್ಧರಿಸಿದೆ. ಇಂದು ಅದೇ ಜಾಗದಲ್ಲಿ ನಿಂತಾಗ 36ವರ್ಷದ ನಮ್ಮ ಜೀವನದ ಪಯಣ ಕಣ್ಣಮುಂದೆ ಹಾದು ಹೋಯಿತು ಎಂದು ದೇವಸ್ಥಾನದಲ್ಲಿ ಪತ್ನಿ ಜೊತೆಗಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

ಮದುವೆ ಫ್ಲ್ಯಾಶ್ ಬ್ಯಾಕ್:
ಜಗ್ಗೇಶ್ ಮತ್ತು ಪರಿಮಳ ಅವರು ಮೊದಲ ಸಲ ಭೇಟಿಯಾದಾಗ ಜಗ್ಗೇಶ್ ಅವರಿಗೆ 19 ವರ್ಷವಾಗಿದ್ದರೆ, ಪರಿಮಳ ಅವರಿಗೆ 14 ವರ್ಷ ಆಗಿತ್ತು. ನಂತರ ಇಬ್ಬರು ಪರಸ್ಪರ ಪ್ರೀತಿಸಿ ಮಾರ್ಚ್ 22 ರಂದು ಪೋಷಕರಿಗೆ ತಿಳಿಯದಂತೆ ರಿಜಿಸ್ಟರ್ ಮದುವೆ ಆಗಿದ್ದರು. ಆದರೆ ಪರಿಮಳ ಅವರು ಅಪ್ರಾಪ್ತರಾಗಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.

View this post on Instagram

ಪರಿಮಳ ನಾನು ಪರಸ್ಪರ 1983ಭೇಟಿಯಾಗಿ ಜೀವನದಲ್ಲಿ ಒಟ್ಟಿಗೆ ಹೆಜ್ಜೆಹಾಕುವ ಎಂದು ನಿರ್ದರಿಸಿದ ಮಲ್ಲೇಶ್ವರ 8ನೆ ಕ್ರಾಸ್ ರಾಯರಮಠದ ಈ ಜಾಗವೆ!ಇಂದು ಅದೆ ಜಾಗದಲ್ಲಿ ನಿಂತಾಗ 36ವರ್ಷದ ನಮ್ಮ ಜೀವನದ ಪಯಣ ಕಣ್ಣಮುಂದೆ ಹಾದು ಹೋಯಿತು..ಮುಂದಿನ ಜನ್ಮ ಯಾರಿಗೆ ಗೊತ್ತು ಇರುವುದೊಂದೆ ಜೀವನ ನಗುತಾ ಇದ್ರೆ ಪಾವನ.. Life is beautiful..smile please.. ಅಲ್ಲವೆ ಬಂಧುಗಳೆ..

A post shared by Jaggesh Shivalingappa (@actor_jaggesh) on

ಈ ಬಗ್ಗೆ ಪತ್ರಿಕೆಯಲ್ಲೂ ಬಂದಿದ್ದು, ಕೊನೆಗೆ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಅಂದು ಸುಪ್ರೀಂ ಕೋರ್ಟ್ ಮಾನವೀಯತೆಯ ಆಧಾರದ ಮೇಲೆ ಇಬ್ಬರ ಪ್ರೀತಿಯ ಮದುವೆಗೆ ಮೊದಲ ಆದ್ಯತೆ ಕೊಟ್ಟಿದ್ದು, ಬಳಿಕ ನ್ಯಾಯಮೂರ್ತಿಗಳು ಪ್ರೇಮಿಗಳ ಪರ ತೀರ್ಪು ಕೊಟ್ಟಿದ್ದರು. ಇಂದು ಅವರು ಮದುವೆಯಾಗಿ 35 ವರ್ಷವಾಗಿದೆ.

Leave a Reply

Your email address will not be published. Required fields are marked *