Connect with us

Cinema

ಡ್ರಗ್ಸ್ ಮಾಫಿಯಾದಿಂದ ಮರ್ಸಿಡಿಸ್, ಜಾಗ್ವಾರ್ ಕಾರು ಪಡೆದ ಕಲಾವಿದರ ಹೆಸರು ಬಹಿರಂಗವಾಗ್ಬೇಕು: ಇಂದ್ರಜಿತ್

Published

on

– ನನಗೆ ರಕ್ಷಣೆ ನೀಡಿದ್ರೆ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ಮಾಫಿಯಾದಿಂದ ಮರ್ಸಿಡಿಸ್, ಜಾಗ್ವಾರ್ ಕಾರು ಪಡೆದ ಕಲಾವಿದರ ಹೆಸರು ಬಹಿರಂಗ ಆಗಬೇಕು ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದಿನ ಶಾಲೆಯ ವಿದ್ಯಾರ್ಥಿಗಳು ಕೂಡ ಡ್ರಗ್ಸ್ ಗೆ ಎಡಿಕ್ಟ್ ಆಗುತ್ತಿದ್ದಾರೆ. ಅಲ್ಲದೆ ಮಕ್ಕಳನ್ನು ಡ್ರಗ್ ಎಡಿಕ್ಟ್ ಆಗುವಂತೆ ಮಾಡುವವರು ಇದ್ದಾರೆ. ಇದೊಂದು ದೊಡ್ಡ ಮಾಫಿಯಾ ಆಗಿದೆ ಎಂದರು.

ಹಲವಾರು ರೇವ್ ಪಾರ್ಟಿಗಳು ನಡೆಯುತ್ತಾ ಇರುತ್ತವೆ. ಯುವ ನಟ ಹಾಗೂ ನಟರು ಇದರಲ್ಲಿ ಸಿಲುಕಿದ್ದಾರೆ. ನನಗೆ ಪರಿಚಯ ಇರುವಂತಹ ಹಾಗೂ ಈಗಾಗಲೇ ಖ್ಯಾತಿಯಲ್ಲಿರುವವವರು ಯಾರೂ ಮಾಡಲ್ಲ ಅಂತ ನಾನು ಖಂಡಿತವಾಗಿ ಹೇಳಬಹುದು. ಆದರೆ ಸಡನ್ ಆಗಿ ಪ್ರಚಾರ ಪಡೆಯುತ್ತಿರುವಂತಹ ಯುವ ನಟ-ನಟಿಯರು ಪಾರ್ಟಿ ಹಾಗೂ ಈ ರೀತಿಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಳ್ಳುತ್ತಾರೆ ಅಂತ ನಾನು ಕೇಳಿದ್ದೀನಿ. ಹಲವಾರು ಘಟನೆಗಳು ಕೂಡ ನನಗೆ ತಿಳಿದಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದಂತೆ ನನಗೂ ರಕ್ಷಣೆ ಕೊಟ್ಟರೆ ನಾನೂ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ನಾನು ಡ್ರಗ್ಸ್ ಸೇವನೆ ಮಾಡಲ್ಲ, ಮಾಡೋರ ಬಗ್ಗೆ ಗೊತ್ತಿಲ್ಲ: ರಚಿತಾ ರಾಮ್

ನಮ್ಮಲ್ಲಿ ರೇವ್ ಪಾರ್ಟಿಗಳು ನಡೆಯುತ್ತೆ. ಯುವ ನಟ-ನಟಿಯರು ಮಾದಕ ವಸ್ತುಗಳನ್ನ ಬಳಸುತ್ತಿದ್ದಾರೆ. ಈ ಕುರಿತು ಸೂಕ್ತತವಾದ ತನಿಖೆ ನಡೆಯಬೇಕು. ಸರಿಯಾದ ತನಿಖೆ ನಡೆದು ಸಾಕ್ಷಿ ಸಮೇತ ಬಹಿರಂಗಪಡಿಸಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ತನಿಖೆಗೆ ನಾನು ಕೂಡ ಸಂಪೂರ್ಣ ಸಹಕಾರ ಕೊಡ್ತೀನಿ. ಅಧಿಕಾರಿಗಳು ಕರೆದರೆ ತನಿಖೆಗೆ ಇನ್ನಷ್ಟು ಮಾಹಿತಿ ಕೊಡುವುದಾಗಿ ಅವರು ಹೇಳಿದರು.

Click to comment

Leave a Reply

Your email address will not be published. Required fields are marked *