Wednesday, 12th December 2018

ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

ಬೆಂಗಳೂರು: ಹಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿದ್ದ ಸ್ಯಾಂಡಲ್‍ವುಡ್ ತಾರೆಯರಾದ ದಿಗಂತ್, ಐಂದ್ರಿತಾ ರೇ ಸಪ್ತಪದಿ ತುಳಿಯುಲು ಸಜ್ಜಾಗುತ್ತಿರುವ ಸುದ್ದಿ ಬಹಿರಂಗವಾಗುತ್ತಿದಂತೆ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇತ್ತ ನಟ ದಿಗಂತ್ ಭಾವಿ ಪತ್ನಿಗೆ ಗೋವಾ ಶೂಟಿಂಗ್ ಸ್ಪಾಟ್‍ನಲ್ಲೇ ಪ್ರಪೋಸ್ ಮಾಡಿದ್ದು, ನೀನು ನನ್ನನ್ನು ಮದುವೆಯಾಗುತ್ತಿಯಾ ಎಂದು ಹೇಳಿ ರಿಂಗ್ ತೊಡಿಸಿದ್ದಾರೆ. ಐಂದ್ರಿತಾ ಅವರಿಗೆ ತಿಳಿಸದೇ ಪ್ಲಾನ್ ಮಾಡಿದ್ದ ದಿಗಂತ್ ಈ ಮೂಲಕ ಬಿಗ್ ಸರ್ಪ್ರೈಸ್ ನೀಡಿದರು.

ಡಿಸೆಂಬರ್ 12 ರಂದು ಈ ಪ್ರೇಮಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಬೆಂಗಾಳಿ ಹಾಗೂ ಕರ್ನಾಟಕ ಸಂಪ್ರದಾಯದಲ್ಲಿ ಮದುವೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಈಗಾಗಲೇ ಶ್ರೀಲಂಕಾದಲ್ಲಿ ನಟ ದಿಗಂತ್ ಬ್ಯಾಚುಲರ್ ಪಾರ್ಟಿ ಮಾಡಿ ಮುಗಿಸಿದ್ದು, ಸದ್ಯ ಐಂದ್ರಿತಾ ಗೋವಾದಲ್ಲಿ ಗರುಡ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ಝೀರೋ ವೇಸ್ಟೇಜ್ ಕಾನ್ಸೆಪ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮಾಡಲು ಐಂದ್ರಿತಾ ದಿಗಂತ್ ಪ್ಲ್ಯಾನ್ ಮಾಡಿದ್ದು, ಸರಳವಾಗಿ ಸಾಂಪ್ರದಾಯಿಕವಾಗಿ ಮದುವೆ ಆಗಲು ಜೋಡಿ ನಿರ್ಧರಿಸಿದೆ.

ಶೂಟಿಂಗ್ ಸ್ಥಳದಲ್ಲಿ ಹಿರಿಯ ನಟ ರಂಗಾಯಣ ರಘು ಸೇರಿದಂತೆ ಇಡೀ ಚಿತ್ರತಂಡ ಐಂದ್ರಿತಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಡಿಸೆಂಬರ್ 12 ಮದುವೆ ಎಂದು ಐಂದ್ರಿತಾ ಅವರು ಘೋಷಣೆ ಮಾಡುತ್ತಿದಂತೆ ಚಿತ್ರತಂಡ ಎಲ್ಲಾ ಸದಸ್ಯರು ಸಂತಸಗೊಂಡರು. ಬಳಿಕ ಮಾತನಾಡಿದ ರಂಗಾಯಣ ರಘು ಅವರು, ಇಬ್ಬರು ಒಳ್ಳೆ ಜೋಡಿಯಾಗಿದ್ದು, ದೇವರು ಇವರ ಜೀವನದಲ್ಲಿ ಸಂತಸ ನೀಡಲಿ ಎಂದು ಹಾರೈಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

Leave a Reply

Your email address will not be published. Required fields are marked *